ಸೆ. 12ರವರೆಗೆ ಭಾರಿ ಮಳೆ ಸಾಧ್ಯತೆ:ನದಿಯ ದಂಡೆಯತ್ತ ಹೋಗದಂತೆ ಸಾರ್ವಜನಿಕರಲ್ಲಿ ಡಿ.ಸಿ. ಮನವಿ

ಕಲಬುರಗಿ,ಸೆ.9:ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಇದೇ ಸೆಪ್ಟೆಂಬರ್ 9 ರಿಂದ 12 ರವರೆಗೆ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ನದಿಗಳ ದಂಡೆಗೆ ಹೋಗದಂತೆ ಸಾರ್ವಜನಿಕರಲ್ಲಿ ಡಿ.ಸಿ. ಯಶವಂತ ವಿ. ಗುರುಕರ್ ಅವರು ಮನವಿ ಮಾಡಿದ್ದಾರೆ.

ಜಿಲ್ಲೆಯ ಭೀಮಾ ನದಿ ತೀರ, ಸನ್ನತಿ ಗ್ರಾಮದ ಬ್ರೀಜ್ಡ್-ಕಂ-ಬ್ಯಾರೇಜ್, ಬೆಣ್ಣೆತೋರಾ ಜಲಾಶಯ, ಕೆಳದಂಡೆ ಮುಲ್ಲಾಮಾರಿ ಹಾಗೂ ಕಾಗಿಣಾ ನದಿಯ ದಂಡೆ ಕಡೆಗೆ ಸಾರ್ವಜನಿಕರು ಹೋಗದಂತೆ ಹಾಗೂ ಜಾನುವಾರುಗಳನ್ನು ಸಹ ಬಿಡದಂತೆ ಎಚ್ಚರಿಕೆವಹಿಸಲು ತಿಳಿಸಿದ್ದಾರೆ.

    ಮಳೆ ಅಥವಾ ನೆರೆ ಹಾವಳಿಯಿಂದ ಏನಾದರೂ ಸಮಸ್ಯೆ ಕಂಡುಬಂದಲ್ಲಿ ತುರ್ತು ಸಹಾಯವಾಣಿ ಸಂಖ್ಯೆ 1077 ಹಾಗೂ ದೂರವಾಣಿ ಸಂಖ್ಯೆ 08472-278677ಗೆ ಸಂಪರ್ಕಿಸಬಹುದಾಗಿದೆ.