ಸೆ. 11 ರಂದು ಶಿವಶರಣ ಹೂಗಾರ ಮಾದಣ್ಣಾ ಜಯಂತಿ :ಚಂದ್ರಕಾಂತ ಹೂಗಾರ ಗಾದಗಿ

ಬೀದರ್,ಸೆ.9: ದೇಶಕ್ಕೆ ಸ್ವತಂತ್ರ್ಯ ಸಿಕ್ಕು 75 ವರ್ಷಗಳು ಕಳೆದರು ಸಹ ಇನ್ನೂವರೆಗೂ ತಮ್ಮ ಸಮಾಜಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ದೊರಕಿಲ್ಲ. ಆರ್ಥಿಕವಾಗಿ ಶೈಕ್ಷಿಣಿಕವಾಗಿ, ಸಾಮಾಜಿಕವಾಗಿ ತೀವ್ರ ಹಿಂದೂಳಿದ ತಮ್ಮ ಸಮಾಜಕ್ಕೆ ಸರಕಾರ ಪರಿಗಣಿಸಿ ಹೂಗಾರ ಮಾದಣ್ಣಾ ನಿಗಮಮಂಡಳಿ ಸ್ಥಾಪಿಸಬೇಕು ಮತ್ತು ಸರಕಾರದಿಂದಲೇ ಜಯಂತಿ ಆಚರಿಸಬೇಕು ಎಂದು ಕರ್ನಾಟಕ ರಾಜ್ಯ ಹೂಗಾರ ಸಮಾಜದ ಬೀದರ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಕಾಂತ ಹೂಗಾರ ಗಾದಗಿ ಅವರು ಸರಕಾರಕ್ಕೆ ಒತ್ತಾಯಿಸಿದರು.

ಅವರು ದಿ: 8-9-2022 ರಂದು ಬೀದರ ನಗರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತಿದ್ದರು. ದಿ. 11-9-2022 ರಂದು ಬೀದರ ಚಿದ್ರಿಯ ಶ್ರೀ ಬುತ್ತಿಬಸವಣ್ಣಾ ಮಂದಿರದಲ್ಲಿ 12ನೇ ಶತಮಾನದ ಶಿವಶರಣ ಹೂಗಾರ ಮಾದಣ್ಣಾ ಅವರ ಜಯಂತಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ನಿಮಿತ್ಯವಾಗಿ ನೌಬಾದ ಶ್ರೀ ಬಸವೇಶ್ವರ ಸರ್ಕಲ್‍ದಿಂದ 6 ಕಿ.ಮೀ. ಅಂತರದ ಶ್ರೀ ಬುತ್ತಿ ಬಸವಣ್ಣ ಮಂದಿರದವರೆಗೆ ಸಮಾಜದ ಧರ್ಮ ಗುರು ಆದ ನದಿಸಿಣೂರ ಶ್ರೀ ಹೂಗಾರ ಮಾದಯ್ಯಾ, ಶ್ರೀ ಮಹಾಲಕ್ಷ್ಮಿದೇವಿ ಮಹಾಶಕ್ತಿ ಪೀಠದ ಪ.ಪೂ. ಶ್ರೀ ಗುರುರಾಜೇಂದ್ರ ಶಿವಯೋಗಿಗಳ ದಿವ್ಯ ನೇತೃತ್ವದಲ್ಲಿ ಭವ್ಯ ಮೆರವಣಿಗೆ, ಬೈಕ್ ರ್ಯಾಲಿಯೊಂದಿಗೆ ನಡೆಸಲಾಗುತ್ತಿದೆ. ರಾಷ್ಟ್ರಿಯ ಬಸವದಳ ಅಧ್ಯಕ್ಷ ಸೋಮಶೇಖರ ಅಣ್ಣೆಪ್ಪಾ ಪಾಟೀಲ ಗಾದಗಿ ಜಯಂತಿ ಉದ್ಘಾಟಿಸುವರು. ಡಾ. ಶೈಲೇಂದ್ರ ಬೆಲ್ದಾಳೆ, ಶಾಸಕ ರಹೀಂ ಖಾನ್, ಬಂಡೆಪ್ಪಾ ಖಾಸೆಂಪೂರ, ಸೂರ್ಯಕಾಂತ ನಾಗಮಾರಪಳ್ಳಿ, ಅಶೋಕ ಖೇಣಿ ಸೇರಿದಂತೆ ಅನೇಕರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆಂದು ಚಂದ್ರಕಾಂತ ಹೂಗಾರ ಗಾದಗಿ ವಿವರಿಸಿದರು.

ರಾಜ್ಯ ಉಪಾಧ್ಯಕ್ಷರಾದ ಸಿದ್ದಪ್ಪಾ ಫೂಲಾರಿ ವಿಷಯ ಪ್ರಸ್ತಾಪಿಸಿ ಸರಕಾರ ಪ್ರತಿ ಜಿಲ್ಲೆಗೆ ಶಿವಶರಣ ಹೂಗಾರ ಮಾದಣ್ಣಾ ಸಮುದಾಯ ಭವನಗಳನ್ನು ನಿರ್ಮಿಸಬೇಕು. ನಿಗಮಮಂಡಳಿ ಸ್ಥಾಪಿಸಬೇಕು. ಬೀದರ ಜಿಲ್ಲೆಯಲ್ಲಿ ಕೇವಲ 6ಜನ ಮಾತ್ರ ಗ್ರಾಮ ಪಂಚಾಯತಿ ಸದಸ್ಯರಿದ್ದಾರೆ. ಉಳಿದ ಯಾವುದೆ ಸ್ಥಳಿಯ ಸಂಸ್ಥೆಗಳಲ್ಲಿ ಸ್ಥಾನಮಾನ ಹೊಂದಿಲ್ಲ. ಸರಕಾರ ನಿರ್ಲಕ್ಷ್ಯ ತೋರಿದ್ದು ಈಗಲಾದರೂ ತಾ.ಪಂ. ಜಿ.ಪಂ. ಮತ್ತು ಶಾಸಕ ಸ್ಥಾನಗಳಿಗಾಗಿ ಸಮಾಜ ಬಾಂಧವರಿಗೆ ರಾಜಕೀಯ ಪ್ರಾಶಸ್ತ್ಯ ನೀಡಬೇಕು. ರಾಜ್ಯದಲ್ಲಿ 8 ಲಕ್ಷ ಜಿಲ್ಲೆಯಲ್ಲಿ 20 ಸಾವಿರ ಜನಸಂಖ್ಯೆ ಹೊಂದಿರುವ ಹೂಗಾರ ಸಮಾಜಕ್ಕೆ ಸರ್ವಾಂಗಿಣ ಅಭಿವೃದ್ಧಿಗಾಗಿ ಸರಕಾರ ಸಕಲ ಸವಲತ್ತುಗಳನ್ನು ಒದಗಿಸಬೇಕೆಂದು ಒತ್ತಾಯಿಸಿದ ಅವರು ತಮ್ಮ ಸಮಾಜದ ಬೇಡಿಕೆ ಈಡೇರದ್ದಿರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡ¯ಗುವುದು ಎಂದು ಸಿದ್ದಪ್ಪಾ ಫುಲಾರಿ ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ದಕ್ಷಿಣ ಅಧ್ಯಕ್ಷ ಶ್ರೀನಿವಾಸ ಹೂಗಾರ ಬೇಮಳಖೇಡ, ಬೀದರ ಅಧ್ಯಕ್ಷ ಸತೀಶ್ ಹೂಗಾರ, ಸಿದ್ದೇಶ್ವರ ಬಸವರಾಜ, ಮಹಾದೇವ ಕಂಟೆಪ್ಪಾ ಹೂಗಾರ, ರಾಜಕುಮಾರ ಮಾರುತ್ತೆಪ್ಪಾ ಹೂಗಾರ, ಮಂಜುನಾಥ ರಮೇಶ ಹೂಗಾರ, ಜಗನ್ನಾಥ ಬಸವರಾಜ ಹೂಗಾರ ಗಾದಗಿ, ಓಂಕಾರ ವೀರಶೇಟ್ಟಿ ಹೂಗಾರ, ಅನೀಲ ಮಹಾರುದ್ರಪ್ಪಾ ಹೂಗಾರ ಮತ್ತು ಕಿಶೋರ ಶಿವರುದ್ರಪ್ಪಾ ಹೂಗಾರ ಉಪಸ್ಥಿತರಿದ್ದರು.