ಸೆ.11ರಿಂದ ಇಂದ್ರ ಧನುಷ್ ಅಭಿಯಾನ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.09 : ನಗರದ 28ನೇ ವಾರ್ಡಿನಲ್ಲಿ ತೀವ್ರತರ ಇಂದ್ರ ಧನುಷ್ ಅಭಿಯಾನ 5.0,  2ನೇ ಸುತ್ತಿನ ಲಸಿಕಾ ಅಭಿಯಾನ ಕುರಿತಂತೆ  ಮಕ್ಕಳಿಗೆ ನೀಡುವ ಲಸಿಕೆಗಳು, ಯಾವ ರೋಗಗಳ ವಿರುದ್ಧ ರಕ್ಷಣೆಯನ್ನು ಹೊಂದಿವೆ, ಲಸಿಕೆ ಪಡೆಯದಿದ್ದರೆ ಮಾರಕ ರೋಗಗಳಿಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾಕ್ಟರ್ ಮಹಾಲಕ್ಷ್ಮಿ ಹೇಳಿದರು.
ಯಾವ ಒಂದು ಮಗು ಲಸಿಕೆಯಿಂದ ವಂಚಿತವಾಗಬಾರದೆಂಬ ಸದುದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ತಿಳಿಸಿದರು.
ದಿನಾಂಕ 11 ರಿಂದ 16 ರವರೆಗೆ ನಡೆಯುವ ಈ ಅಭಿಯಾನದಲ್ಲಿ ಎಲ್ಲರೂ ತಮ್ಮ ಮಕ್ಕಳಿಗೆ ಲಸಿಕೆಯನ್ನು ಪಡೆದು ರೋಗಗಳಿಂದ ರಕ್ಷಿಸಿಕೊಳ್ಳಿ ಎಂದು  ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಶೇಖರ್ ಹೇಳಿದರು. 
ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು ಮಕ್ಕಳ ತಾಯಿಯಂದಿರು ಮತ್ತು ಯುವಕರು ಇದ್ದರು.