ಸೆ.11ಕ್ಕೆ ಮಾಚಿದೇವರ ಸ್ಮರಣೋತ್ಸವ, ಪ್ರತಿಭಾ ಪುರಸ್ಕಾರ

ಸಂಜೆವಾಣಿ ವಾರ್ತೆ

ದಾವಣಗೆರೆ: ಶ್ರೀಮಡಿವಾಳ ಮಾಚಿದೇವ ಸಂಘ, ವಿನೋಬನಗರ ದಾವಣಗೆರೆ, ಮಹಿಳಾ ಸಂಘ, ಮಡಿಕಟ್ಟೆ ಸಮಿತಿ ಇವರ ಸಹಯೋಗದಲ್ಲಿ ಸೆ. 11ರಂದು ವಿನೋಬಾ ನಗರದ 1ನೇ ಮುಖ್ಯರಸ್ತೆ, 17ನೇ ತಿರುವಿನಲ್ಲಿರುವ ಶ್ರೀ ಮಾಚಿದೇವ ಸಮುದಾಯ ಭವನದಲ್ಲಿ ಶ್ರೀಮಡಿವಾಳ ಮಾಚಿದೇವರ ಶ್ರಾವಣ ಮಾಸದ ಸ್ಮರಣೋತ್ಸವ ಕಾರ್ಯಕ್ರಮ, ಪ್ರತಿಭಾವಂತ ವಿದ್ಯಾರ್ಥಿಗಳೀಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಸಂಘದ ಜಿಲ್ಲಾಧ್ಯಕ್ಷ ಎಂ.ನಾಗೇಂದ್ರಪ್ಪ  ಅಧ್ಯಕ್ಷತೆಯಲ್ಲಿ ವಿನೋಬಾ ನಗರದ ಮಾಚಿದೇವ ಸಮುದಾಯ ಭವನದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸೆ.11ರ ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಧ್ಯಾಹ್ನ 11.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮಕ್ಕೆ ಜಿಲ್ಲೆಯ ಸಚಿವರು, ಸಂಸದರು, ಶಾಸಕರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ದಾನಿಗಳನ್ನು ಆಹ್ವಾನಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಯಿತು.ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಓಂಕಾರಪ್ಪ, ಸಹಕಾರ್ಯದರ್ಶಿ ಆರ್.ಎನ್.ಧನಂಜಯ, ಖಜಾಂಚಿ ಸುರೇಶ್ ಎಂ.ಕೋಗುಂಡೆ, ಉಪಾಧ್ಯಕ್ಷರಾದ ಪಿ.ಮಂಜುನಾಥ್, ಜಿ.ವಿಜಯಕುಮಾರ್, ಬಿ.ಅಜ್ಜಯ್ಯ, ಸಿ.ಗುಡ್ಡಪ್ಪ, ಹೆಚ್.ದುಗ್ಗಪ್ಪ, ಪತ್ರಕರ್ತ ಎಂ.ವೈ.ಸತೀಶ್, ರವಿಚಿಕ್ಕಣ್ಣ, ಗೋಪಾಲಸ್ವಾಮಿ, ಬಾತಿ ಶಂಕರ್, ಕಿಶೋರ್‌ಕುಮಾರ್, ಎಂ.ಸುಭಾಷ್ ಇತರರು ಇದ್ದರು.