
ಶಹಾಪುರ: ಸೆ.8:ಇಲ್ಲಿಗೆ ಸಮೀಪದ ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಶಹಾಪುರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತುಂಬಗಿ ಪ್ರಕಾಶನ ಶಹಾಪುರ ವತಿಯಿಂದ ದಿನಾಂಕ ಸೆಪ್ಟೆಂಬರ್ 10 ರವಿವಾರ ಬೆಳಿಗ್ಗೆ 10 ಗಂಟೆಗೆ ಕನ್ನಡ ಉಪನ್ಯಾಸಕಿ ನಿರ್ಮಲಾ ತುಂಬಗಿ ಅವರ ಸಂಪಾದಿತ ನಿವೃತ್ತ ಉಪನಿರ್ದೇಶಕ ಚಂದ್ರಕಾಂತ ಜೆ. ಹಿಳ್ಳಿ ಅವರ ವ್ಯಕ್ತಿತ್ವ ಮತ್ತು ಸಾಧನೆ ಕುರಿತಾದ “ಶಿಕ್ಷಣ ಚೇತನ” ಕೃತಿ ಲೋಕಾರ್ಪಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ಧಪ್ಪ ಹೊಟ್ಟಿ ಅವರು ಉದ್ಘಾಟಿಸುವರು. ಹೈದ್ರಾಬಾದ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಸಾಹಿತಿ ಪ್ರೊ. ಲಿಂಗಪ್ಪ ಗೋನಾಲ ಅವರು "ಶಿಕ್ಷಣ ಚೇತನ" ಕೃತಿ ಲೋಕಾರ್ಪಣೆ ಮಾಡುವರು. ಕೃಷಿ ಮಹಾವಿದ್ಯಾಲಯದ ಡೀನರಾದ ಡಾ. ಪಿ.ಎಚ್. ಕುಚನೂರು ಅವರು ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ವಿಶ್ವಕರ್ಮ ಏಕದಂಡಗಿ ಮಠದ ಪೂಜ್ಯರಾದ ಅಜೇಂದ್ರ ಮಹಾಸ್ವಾಮಿಗಳು ಕೃತಿ ಕುರಿತು ಮಾತನಾಡುವರು. ಯಾದಗಿರಿ ಜಿಲ್ಲಾ ಪದವಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಕೆ. ಕುಳಗೇರಿ, ಕಲಬುರ್ಗಿ ಜಿಲ್ಲಾ ಪದವಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಸೇಡಂ ಉಪವಿಭಾಗೀಯ ದಂಡಾಧಿಕಾರಿಗಳಾದ ಆಶಪ್ಪ ಪೂಜಾರಿ, ಕೊಪ್ಪಳ ಪದವಿ ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕ ಕೆ. ಭೀಮರಡ್ಡಿ, ವಿಶ್ರಾಂತ ಉಪನಿರ್ದೇಶಕ ಚಂದ್ರಕಾಂತ ಜೆ. ಹಿಳ್ಳಿ, ಹಿರಿಯ ಮುಖಂಡರಾದ ಗುಂಡಪ್ಪ ತುಂಬಗಿ, ಪ್ರೊ. ಶಿವಲಿಂಗಣ್ಣ ಸಾಹು, ಪ್ರಾಚಾರ್ಯ ಧರ್ಮಣ್ಣಗೌಡ ಬಿರಾದಾರ, ಆಗಮಿಸಲಿದ್ದಾರೆ ಎಂದು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರವೀಂದ್ರನಾಥ ಹೊಸಮನಿ ಅವರು ತಿಳಿಸಿದ್ದಾರೆ.