ಸೆ.೩೦ ಕ್ಕೆ ಐತಿಹಾಸಿಕ ಪರಂಪರೆ ಉಳಿಸಿ ಶೈಕ್ಷಣಿಕ ಕಾರ್ಯಕ್ರಮ- ಕೃತಿಗಳ ಲೋಕಾರ್ಪಣೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಸೆ.೨೩: ಪ್ರೊ. ಎಚ್.ಜಿ. ಕೃಷ್ಣಪ್ಪ ಹೊಳೆಅರಳಹಳ್ಳಿ ಮೈಸೂರು ಇವರ “ಮರೆತು ಹೋದ ಹಳ್ಳೂರು ದಕ್ಷಿಣ ಭಾರತದ ದುರಂತ ಇತಿಹಾಸಕ್ಕೆ ಸಾಕ್ಷಿಯೇ?” ಹಾಗೂ ‘ತುಂಗಭದ್ರಾ ಕಣಿವೆಯ ಹಳ್ಳೂರು ಚರಿತ್ರೆಯಲ್ಲಿ ಶ್ರೀ ಲಕ್ಷ್ಮೀ ರಂಗನಾಥ ದೇವಾಲಯ” ಪುಸ್ತಕಗಳ ಬಿಡುಗಡೆ ಹಾಗೂ ಐತಿಹಾಸಿಕ ಪರಂಪರೆ ಉಳಿಸಿ-ಶೈಕ್ಷಣಿಕ ಕಾರ್ಯಕ್ರಮವನ್ನು ಸೆ.೩೦ ರ ಬೆಳಿಗ್ಗೆ ೧೧ ಗಂಟೆಗೆ ಹಾವೇರಿ ಜಿಲ್ಲೆ. ರಟ್ಟೀಹಳ್ಳಿ ತಾಲ್ಲೂಕಿನ ಬೆಳ್ಳೂರು ಶ್ರೀ ಲಕ್ಷ್ಮೀ ರಂಗನಾಥ ದೇವಾಲಯದ ಆವರಣದಲ್ಲಿ   ಹಮ್ಮಿಕೊಳ್ಳಲಾಗಿದೆ ಎಂದು ಪ್ರೊ. ಎಚ್.ಜಿ. ಕೃಷ್ಣಪ್ಪ ಹೊಳೆಅರಳಹಳ್ಳಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಶ್ರೀ ಲಕ್ಷ್ಮೀ ರಂಗನಾಥ ದೇವಾಲಯ ಟ್ರಸ್ಟ್ ಕಮಿಟಿ, ಬೆಳ್ಳೂರು, ಶಾಲಾ ಶಿಕ್ಷಣ ಇಲಾಖೆ, ಹೊನ್ನಾಳಿ, ಕರ್ನಾಟಕ,ಇತಿಹಾಸ ಅಕಾಡೆಮಿ, ಬೆಂಗಳೂರು, ಕರ್ನಾಟಕ ರಾಜ್ಯ ವಿ.ವಿ. ಮತ್ತು ಪದವಿ ಕಾಲೇಜುಗಳ ನಿವೃತ್ತ. ಪ್ರಾಧ್ಯಾಪಕ. ಸಂಘ, ಮೈಸೂರು, ಕಡೆಮನೆ ಪ್ರಕಾಶನ ಮೈಸೂರು ಇವರುಗಳು ಸಂಯುಕ್ತಾಶ್ರಯದಲ್ಲಿ. ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳೂರು ಶ್ರೀ ಲಕ್ಷ್ಮೀ ರಂಗನಾಥ ಟ್ರಸ್ಟ್. ಕಮಿಟಿ  ಅಧ್ಯಕ್ಷ ಬಸವರಾಜಪ್ಪ ಮಹದೇವಪ್ಪ ಮೆಣಸಿನಕಾಯಿ ವಹಿಸಲಿದ್ದಾರೆ. ಹಿರೇಕೆರೂರು ಶಾಸಕ ಯು.ಬಿ. ಬಣಕಾರ್ ಉದ್ಘಾಟನೆ ನೆರವೇರಿಸುವರು. ಕೃತಿಗಳನ್ನು ಹಿರಿಯ ರಾಜಕಾರಣಿ ಟಿ.ಬಿ. ಜಯಚಂದ್ರ  ಹಾಗೂ ಶಾಸಕ ಡಿ.ಜಿ. ಶಾಂತನಗೌಡ ಅವರು ಲೋಕಾರ್ಪಣೆ ಮಾಡಲಿದ್ದಾರೆ.ಗಣ್ಯರಾದ ಡಾ. ದೇವರಕೊಂಡಾ ರೆಡ್ಡಿ, ಪ್ರೊ. ಎಸ್. ಶಿವಾಜಿ ಜೋಯಿಸ್, ಪ್ರೊ. ಎಂ.ಎಚ್. ನಾಗರಾಜು, ಪ್ರೊ. ಎಚ್.ಜೀ. ಕೃಷ್ಣಪ್ಪ ಹೊಳೆಅರಳಹಳ್ಳಿ, ಡಾ. ಎನ್.ಹೆಚ್. ಹಾಲಪ್ಪ, ಡಾ. ರಾಜಕುಮಾರ್, ಇನ್ನಿತರರು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ, ಮಹಾದೇವ ಸ್ವಾಮಿ, ಹನುಮಂತಪ್ಪ, ಬಾಲಚಂದ್ರಪ್ಪ, ಮಂಜುನಾಥ್ ಉಪಸ್ಥಿತರಿದ್ದರು.