ಸೆ.೨೬ : ಶ್ರೀ ಅಂಬಾಭವಾನಿ ಪ್ರತಿಷ್ಠಾಪನೆ

ರಾಯಚೂರು.ಸೆ.೨೧- ಶರನ್ನವರಾತ್ರಿ ಅಂಗವಾಗಿ ೪೦ ನೇ ವರ್ಷದ ಶ್ರೀ ಅಂಬಾಭವಾನಿ ಘಟಸ್ಥಾಪನಾ ನವರಾತ್ರಿ ಉತ್ಸವ ಸಮಾರಂಭ ಸೆ.೨೬ ರಿಂದ ಅಕ್ಟೋಬರ್ ೯ ರವರೆಗೆ ನಡೆಯಲಿದೆ.
ರಾಯಚೂರು ನಗರದ ಬಂಗಿಕುಂಟಾದಲ್ಲಿ ವೀರಶೈವ ಗೌಳಿ ಸಮಾಜ ನವರಾತ್ರಿ ಉತ್ಸವ ಕಾರ್ಯಕ್ರಮ ನಿರ್ವಹಿಸಲಿದೆ. ಸೆ.೨೬ ರಂದು ಮುಂಜಾನೆ ೧೦.೩೦ ಕ್ಕೆ ಶ್ರೀ ಅಂಬಾಭವಾನಿ ಮೆರವಣಿಗೆ ನಡೆಸಲಾಗುತ್ತದೆ. ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಮೆರವಣಿಗೆ ನಡೆಯಲಿದೆ. ಘಟಸ್ಥಾಪನಾ ಕಾರ್ಯಕ್ರಮ ಸಂಜೆ ೬ ಘಂಟೆಗೆ ನಡೆಯಲಿದೆ. ಕಾರ್ಯಕ್ರಮ ಅಂಗವಾಗಿ ಇಂದು ಭೂಮಿ ಪೂಜೆ ನೆರವೇರಿಸಲಾಯಿತು.