ಸೆ.೨೬ ಕ್ಕೆ ನಲ್ಕುಂದದಲ್ಲಿ ಆರೋಗ್ಯ ಶಿಬಿರ

ದಾವಣಗೆರೆ.ಸೆ.೨೪ : ಶ್ರೀ ಆಂಜನೇಯ ಸ್ವಾಮಿ ಸೇವಾ ಸಮಿತಿ ನಲ್ಕುಂದ ಹಾಗೂ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಹೃದಯರೋಗ, ನರರೋಗ, ಮೂತ್ರಪಿಂಡದ ಕಲ್ಲು ಹಾಗೂ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಇದೇ ೨೬ರಂದು ನಲ್ಕುಂದ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಕೆಡಿಪಿ ಸದಸ್ಯ ಪ್ಯಾಟೆ ಹನುಮಪ್ಪ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೬ ರಂದು ಬೆಳಿಗ್ಗೆ ೧೦ಕ್ಕೆ ತಪಾಷಣಾ ಶಿಬಿರ ಆರಂಭಗೊಳ್ಳಲಿದ್ದು, ಮಧ್ಯಾಹ್ನ ೩ಗಂಟೆವರೆಗೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಡಾ.ಜಿ.ಎಂ ಸಿದ್ಧೇಶ್ವರ್ ನೆರವೇರಿಸುವರು. ಅಧ್ಯಕ್ಷತೆಯನ್ನು ಶ್ರೀ ಆಂಜನೇಯ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಕೆ.ರಂಗಸ್ವಾಮಿ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಎಸ್.ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ, ಅಣಬೇರು ಜೀವನಮೂರ್ತಿ,   ಡಾ.ಟಿ.ರುದ್ರಪ್ಪ, ಡಾ.ಕಿರಣ್ ಕೆ. ಗಂಗೂರು, ಓ. ಎಸ್. ದಯಾನಂದ್, ಮಮತಾ ಮಹದೇವಪ್ಪ, ಪ್ಯಾಟೆ ಹನುಮಪ್ಪ, ಸುಮಿತ್ರಾ ಕರಿಬಸಪ್ಪ, ಕೆ. ಓಂಕಾರಪ್ಪ, ಚೆನ್ನಮ್ಮ ದೇವೆಂದ್ರಪ್ಪ, ಎ.ಕೆ.ಶಿವಲಿಂಗಪ್ಪ ಸೇರಿದಂತೆ ಇತರೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು .ತಪಾಸಣಾ ಶಿಬಿರದಲ್ಲಿ ಹೃದಯರೋಗ, ನರರೋಗ, ಮೂತ್ರಪಿಂಡದ ರೋಗ ಹಾಗೂ ಕ್ಯಾನ್ಸರ್ ರೋಗಕ್ಕೆ ಸಂಬಂಧಪಟ್ಟಂತೆ ಎಲ್ಲಾ ತಪಾಸಣೆ, ಔಷಧಿಗಳನ್ನು ಉಚಿತವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ನೀಡಲಾಗುವುದು. ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ೨೦ ಕ್ಕೂ ಹೆಚ್ಚು ವೈದ್ಯರ ತಂಡ ಪಾಲ್ಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಹಾದೇವಪ್ಪ, ಕೆ.ರಂಗಸ್ವಾಮಿ ಟ.ಕೆ.ವೀರಪ್ಪ, ಕರಿಬಸಪ್ಪ, ಸುರೇಶ್, ಪ್ರಕಾಶ್ ಇತರರು ಇದ್ದರು.