ಸೆ.೨೬, ಅ.೫: ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಳದಲ್ಲಿ ಅದ್ದೂರಿ ದಸರಾ ಉತ್ಸವ

ಕಾಪು, ಸೆ.೨೨- ಕರ್ನಾಟಕದ ಕೊಲ್ಹಾಪುರ ಎಂದೆ ಪ್ರಸಿದ್ಧಿ ಪಡೆದಿರುವ ದ.ಕ. ಮೊಗವೀರ ಮಹಾಜನ ಸಂಘ ಅಡಳಿತದ ಉಚ್ಚಿಲ ಶ್ರೀಮಹಾಲಕ್ಷಿ?ಮ ದೇವಸ್ಥಾನದಲ್ಲಿ ಸಹೃದಯಿ ಭಕ್ತರ ಸಹಯೋಗದೊಂದಿಗೆ ನವರಾತ್ರಿ ಉತ್ಸವವನ್ನು ಈ ಬಾರಿ ‘ಉಚ್ಚಿಲ ದಸರಾ ಉತ್ಸವ-೨೦೨೨’ ಎಂದು ಆಚರಿಸಲಾಗುವುದು ಎಂದು ದೇವಳದ ಗೌರವ ಸಲಹೆಗಾರ ನಾಡೊಜ ಡಾ.ಜಿ.ಶಂಕರ್ ತಿಳಿಸಿದ್ದಾರೆ.
ಉಚ್ಚಿಲ ದೇವಳದ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದೇವಸ್ಥಾನದ ಸಮಿಪದಲ್ಲಿ ನೂತನವಾಗಿ ನಿರ್ಮಾಣವಾದ ಸುಸಜ್ಜಿತ ಶ್ರೀಮತಿ ಶಾಲಿನಿ ಡಾ.ನಾಡೋಜ ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ನವದುರ್ಗೆಯರ ಮತ್ತು ಶ್ರೀಶಾರದ ಮಾತೆಯ ವಿಗ್ರಹಗಳ ಪ್ರತಿಷ್ಠಾಪನೆ ಯೊಂದಿಗೆ ಸೆ.೨೬ರಿಂದ ಅ.೫ರವರೆಗೆ ಉಚ್ಚಿಲ ದಸರಾ ಉತ್ಸವವು ಸಂಪನ್ನ ಗೊಳ್ಳಲಿದೆ ಎಂದರು. ಸೆ.೨೬ರಂದು ಬೆಳಿಗ್ಗೆ ೯.೦೫ಕ್ಕೆ ನೂತನವಾಗಿ ಸುಮಾರು ರೂ.೧.೭೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ತೆರೆದ ಸಭಾಂಗಣ ಲೋಕಾರ್ಪಣಾ ಕಾರ್ಯಕ್ರಮ ನಡೆಯಲಿದ್ದು, ಡಾ.ಜಿ.ಶಂಕರ್ ಸಭಾಂಗಣವನ್ನು ಉಧ್ಘಾಟಿಸಲಿರು ವರು. ಸೆ.೨೬ ಬೆಳಿಗ್ಗೆ ೯.೩೦ಕ್ಕೆ ಸರಿಯಾಗಿ ನವದುರ್ಗೆಯರು ಮತ್ತುತಿ ಶಾರದಾ ದೇವಿಯರ ಪ್ರತಿಷ್ಠಾಪನಾ ಕಾರ್ಯಕ್ರಮ ನೂತನ ಸಭಾಂಗಣದಲ್ಲಿ ನಡೆಯಲಿದೆ. ದೇವಸ್ಥಾನದ ಪರಿಸರ ಮತ್ತು ಹೆಜಮಾಡಿಯಿಂದ ಕಾಪು ದೀಪಸ್ತಂಭದವರೆಗೆ ಮಾಡಲಾದ ವಿದ್ಯುದ್ದೀಪಾಲಂಕಾ ರದ ಉದ್ಘಾಟನೆಯು ಸೆ.೨೪ ಶನಿವಾರ ರಾತ್ರಿ ೭ ಗಂಟೆಗೆ ದೇವಳದಲ್ಲಿ ನಡೆಯಲಿದೆ. ಅ.೫ರಂದು ಮಧ್ಯಾಹ್ನ ೩ಗಂಟೆಗೆ ರಾ.ಹೆ. ೬೬ರ ಮೂಲಕ ಶೋಭಾಯಾತ್ರೆಯು ಶ್ರೀಕ್ಷೇತ್ರ ಉಚ್ಚಿಲದಿಂದ ಹೊರಟು ಎರ್ಮಾಳ್- ಪಡುಬಿದ್ರಿ-ಹೆಜಮಾಡಿ ಟೋಲ್ ಗೇಟ್‌ವರೆಗೆ ಸಾಗಿ ಅಲ್ಲಿಂದ ಮರಳಿ ಪಡುಬಿದ್ರಿ-ಎರ್ಮಾಳ್-ಉಚ್ಚಿಲ-ಮೂಳೂರು-ಕೊಪ್ಪಲಂಗಡಿಯಿಂದ ಕಾಪು ದೀಪಸ್ತಂಭದ ಬಳಿ ಸಮುದ್ರದಲ್ಲಿ ವಿಸರ್ಜನೆಗೊಳ್ಳಲಿದೆ. ಶೋಭಾಯಾತ್ರೆಯಲ್ಲಿ ದಶವಿಗ್ರಹಗಳನ್ನೊಳಗೊಂಡ ೧೦ ವಿಶೇಷ ಟ್ಯಾಬ್ಲೋ ಗಳೊಂದಿಗೆ ವಿವಿಧ ಭಜನಾ ತಂಡ ಗಳು, ವಿವಿಧ ವೇಷ ಭೂಷಣಗಳು, ಹುಲಿ ವೇಷಗಳ ಟ್ಯಾಬ್ಲೋ ಸೇರಿದಂತೆ ಒಟ್ಟು ೧೦೦ಕ್ಕೂ ಅಧಿಕ ಟ್ಯಾಬ್ಲೋ ಗಳನ್ನೊಳ ಗೊಂಡ ಶೋಭಾಯಾತ್ರೆ ಗಮನ ಸೆಳೆಯಲಿದೆ. ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿ ಸಂಗೀತ ರಸಮಂಜರಿ ಮತ್ತು ಮನೋರಂಜನಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಉಪಾಧ್ಯಕ್ಷ ಸುಭಾಷ್ಚಂದ್ರ, ಕಾರ್ಯದರ್ಶಿ ಸುಧಾಕರ ಕುಂದರ್, ಜೀರ್ಣೋ ದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಅಮೀನ್, ದೇವಳದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಮಹಿಳಾ ಸಂಘದ ಅಧ್ಯಕ್ಷೆ ಅಪ್ಪಿ ಎಸ್. ಸಾಲ್ಯಾನ್, ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಉಪಸ್ಥಿತರಿದ್ದರು.