ಸೆ.೨೩ ಶಿಕ್ಷಕರ ದಿನಾಚರಣೆ: ರೂಸ್ಮ ಅವಾರ್ಡ್ ಪ್ರಶಸ್ತಿ ಪ್ರದಾನ – ನಾಗಿರೆಡ್ಡಿ

ರಾಯಚೂರು,ಸೆ.೬- ರಾಯಚೂರು ನಗರ ಮತ್ತು ಗ್ರಾಮಾಂತರ ಭಾಗದ ಖಾಸಗಿ ಅನುದಾನ ರಹಿತ ಶಿಕ್ಷಣ ಆಡಳಿತ ಮಂಡಳಿಗಳ ಒಕ್ಕೂಟ ವತಿಯಿಂದ ಸೆಪ್ಟೆಂಬರ್ ೨೩ ರಂದು ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರೂಸ್ಮ ಅಧ್ಯಕ್ಷ ಎಸ್ ಕೆ.ನಾಗಿರೆಡ್ಡಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಕಾರ್ಯಕ್ರಮವು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಬೆಳ್ಳಿಗೆ ೯:೩೦ ಕ್ಕೆ ಆಯೋಜಿಸಲಾಗಿದೆ.ಪ್ರತಿ ಶಾಲಾ ಆಡಳಿತ ಮಂಡಳಿಯಿಂದ ಪೂರ್ವ ಪ್ರಾಥಮಿಕ,ಮತ್ತು ಹಿರಿಯ ಪ್ರಾಥಮಿಕ ವಿಭಾಗದಿಂದ ಒಬ್ಬರಂತೆ ಹಾಗೂ ಪ್ರೌಢಶಾಲಾ ವಿಭಾಗದಿಂದ ಒಬ್ಬರಂತೆ ಎಲ್ಲಾ ಖಾಸಗಿ ಶಾಲೆಯಿಂದ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿ ಶಿಕ್ಷಕರ ಪ್ರಶಸ್ತಿಗೆ ಹೆಸರನ್ನು ಸೂಚಿಸಲು ಕೋರಲಾಗಿದೆ.ರೂಸ್ಮ ಅವಾರ್ಡ್ ಪ್ರಶಸ್ತಿ ಸಾಮಾಜಿಕವಾಗಿ,ಶಕ್ಷಣಿಕವಾಗಿ,ಧಾರ್ಮಿಕವಾಗಿ,ಸಾಂಸ್ಕೃತಿಕವಾಗಿ ಸಾಧನೆ ಮಾಡಿದ ಉತ್ತಮ ಸೇವೆ ಸಲ್ಲಿಸಿದ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಿ ರೂಸ್ಮ ಅವಾರ್ಡ್ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನಿಸಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರು,ಶಾಸಕರು,ಸಂಸದರು,ನಗರಸಭೆ ಅದ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಇತರೆ ಇತರೆ ಮುಖಂಡರು ಮತ್ತು ಧಾರ್ಮಿಕ ಗುರು ಮಾನ್ಯರು ಹಾಗೂ ಶಿಕ್ಷಣ ಪ್ರೇಮಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ರಾಜಾ ಶ್ರೀನಿವಾಸ್,ಗಿರೀಶ್ ಆಚಾರ್ಯ, ಎಚ್.ವೆಂಕಟೇಶ್,ಎನ್.ಶಂಕರ್,ಹೈ ಫಿರೋಜ್ ಇದ್ದರು.