ಸೆ.೨೩ ರಂದು ರಾಜ, ರಾಣಿ, ರೊರರ್ ರಾಕೇಟ್ ಚಿತ್ರ ಬಿಡುಗಡೆ

ದಾವಣಗೆರೆ. ಸೆ.೧೬: ಹೊಸಬರೇ ಅಭಿನಯಿಸಿರುವ ಚಿತ್ರ ಹಾಗೂ ಹಳ್ಳಿಯ ಯುವಕರು‌ ನಗರಕ್ಕೆ ಬಂದಾಗ ನಡೆಯುವ ಕಥಾಹಂದರದ ರಾಜ, ರಾಣಿ, ರೊರರ್ ರಾಕೇಟ್ ಚಿತ್ರ ಇದೇ ಸೆ.೨೩ ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ನಾಗರಾಜ್ ಅಜ್ಜಂಪುರ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಿತ್ರದಲ್ಲಿ೫  ಹಾಡುಗಳಿದ್ದು, ೩ ಫೈಟ್ ಗಳಿವೆ.ರಾಜ್ಯದ ೫೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದರು.ನಿರ್ದೇಶಕ ಕೆಂಪೇಗೌಡ ಮಾಗಡಿ ಮಾತನಾಡಿ ಹಳ್ಳಿಯ ನಾಲ್ಕು ಸ್ನೇಹಿತರ ನಡುವೆ ನಡೆಯುವ ಕಥೆ. ಒಂದು ಹುಡುಗಾಟದ ಕಥೆ ಇದಾಗಿದ್ದು ಇದರಲ್ಲಿ ಹಳ್ಳಿಗೆ ಒಳ್ಳೆಯದು ಮಾಡುವ ಕಥಾ ಹಂದರ ಚಿತ್ರದಲ್ಲಿದೆ. ಸಸ್ಪೆನ್ಸ್ ,ಲವ್, ಕಾಮಿಡಿ‌ ಹಾಗೂ ಮನೋರಂಜನೆ ನಮ್ಮ ಚಿತ್ರದಲ್ಲಿದೆ. ಸಮಾಜಕ್ಕೆ ಬೇಡವಾದ ಯುವಕರು ಹಳ್ಳಿ ಬಿಟ್ಟು ನಗರಕ್ಕೆ ಬಂದಾಗ ನಡೆಯುವ ಕಥೆ ಇದಾಗಿದೆ. ಬೆಂಗಳೂರು ಹಾಗೂ ಮಾಗಡಿ ಸುತ್ತಮುತ್ತಲು ಚಿತ್ರೀಕರಣ ಮಾಡಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ನಾಯಕ ಭೂಷಣ್, ನಾಯಕಿ ಮಾನ್ಯ, ಜಗದೀಶ್ ಇದ್ದರು.