ಸೆ. ೨೧ ರಿಂದ ಜೋಡಿರೈಲು ಸಂಚಾರ

ನವದೆಹಲಿ, ಸೆ. ೧೭- ಕೆಲವು ಮಾರ್ಗದ ರೈಲುಗಳಿಗೆ ಭಾರೀ ಬೇಡಿಕೆಯಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ೨೦ ಜೋಡಿ ರೈಲುಗಳನ್ನು ಓಡಿಸಲಿದ್ದು ಸೆ. ೨೧ ರಿಂದ ಕೆಲವು ಮಾರ್ಗಗಳಲ್ಲಿ ಮಾತ್ರ ಈ ರೈಲುಗಳು ಸಂಚಾರ ನಡೆಸಲಿವೆ.
ಈ ಕುರಿತು ಭಾರತೀಯ ರೈಲ್ವೆ ಘೋಷಣೆ ಮಾಡಿದ್ದು ಈಗಾಗಲೇ ಸಂಚಾರ ನಡೆಸುತ್ತಿರುವ ವಿಶೇಷ ರೈಲುಗಳು, ಶ್ರಮಿಕ್ ರೈಲುಗಳಿಗೆ ಪರ್ಯಾಯವಾಗಿ ಈ ಜೋಡಿರೈಲುಗಳು ಸಂಚರಿಸಲಿದ್ದು, ಕರ್ನಾಟಕದಿಂದಲೂ ಕೆಲವು ಕ್ಲೋನ್ ರೈಲುಗಳು ಸಂಚಾರ ನಡೆಸಲಿವೆ.
ಸೆ. ೧೨ ರಿಂದ ಭಾರತೀಯ ರೈಲ್ವೆ ೪೦ ಜೋಡಿಗಳ ಸಂಚಾರ ಆರಂಭಿಸಿದೆ. ಆದರೆ ಕೆಲವು ಮಾರ್ಗದ ರೈಲುಗಳಿಗೆ ಭಾರೀ ಬೇಡಿಕೆಯಿರುವ ಹಿನ್ನೆಲೆಯಲ್ಲಿ ಸೆ.೨೧ ರಿಂದ ೨೦ ಜೋಡಿ ಕ್ಲೋನ್ ರೈಲುಗಳನ್ನು ಓಡಿಸಲು ಕ್ರಮ ಕೈಗೊಳ್ಳಲಾಗಿದೆ.
ಈ ಕ್ಲೋನ್ ರೈಲುಗಳು ಅಧಿಸೂಚಿತ ಸಮಯದಲ್ಲಿ ಮಾತ್ರ ಸಂಚಾರ ನಡೆಸಲಿವೆ. ನಿಲುಗಡೆ ಸಹ ಸಿಮೀತವಾಗಿದ್ದು ಸಂಪೂರ್ಣ ಕಾಯ್ದಿರಿಸಿದ ರೈಲುಗಳಾಗಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕ್ಲೋನ್ ರೈಲುಗಳ ದರ ಹಂಸ್ ಆಫರ್ ಎಕ್ಸ್ [ಪ್ರೈಸ್ ದರಕ್ಕೆ ಸಮಾನಾಗಿರುತ್ತದೆ. ಲಕ್ನೌ ಮತ್ತು ದೆಹಲಿ ನಡುವಿನ ಕ್ಲೋನ್ ರೈಲಿನ ದರ ಜನಶತಾಬ್ದಿ ರೈಲಿನ ದರಕ್ಕೆ ಸಮನಾಗಿರುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದೆ.
೧೦ ದಿನಗಳ ಮುಂಗಡ ಟಿಕೇಟ್
ಕ್ಲೋನ್ ರೈಲುಗಳಿಗೆ ಮುಂಗಡ ಟಿಕೇಟ್ ಬಿಕ್ಕಿಂಗ್ ಕಾಯ್ದಿರಿಸುವ ಅವಧಿ ೧೦ ದಿನಗಳು. ಪ್ರಸ್ತುತ ಸಂಚಾರ ನಡೆಸುತ್ತಿರುವ ೩೧೦ ವಿಶೇಷ ರೈಲುಗಳಿಗೆ ಹೆಚ್ಚುವರಿಯಾಗಿ ಈ ರೈಲುಗಳು ಸಂಚಾರ ನಡೆಸಲಿವೆ. ಆಯಾ ರಾಜ್ಯಗಳ ಸಲಹೆಗಳನ್ನು ಪರಿಗಣಿಸಿ ಮಾರ್ಗಗಳನ್ನು ಅಂತಿಮ ಗೊಳಿಸಲಾಗಿದೆ.
೨೦ ಜೋಡಿ ರೈಲುಗಳು ಪೈಕಿ ಕೆಲವು ರೈಲುಗಳು ಕರ್ನಾಟಕದಿಂದಲೂ ಸಂಚರಿಸಲಿವೆ. ಬೆಂಗಳೂರು- ದಾನಾಪುರ್ ನಡುವೆ ವಾರಕ್ಕೊಮ್ಮೆ ಯಶವಂತಪುರ- ನಿಜಾಮುದ್ದಿನ್ ನಡುವೆ ವಾರಕ್ಕೆ ಎರಡು ಬಾರಿ ಕ್ಲೋನ್ ರೈಲು ಸಂಚಾರನಡೆಸಲಿವೆ.
ಭಾರತೀಯ ರೈಲ್ವೆ ಕ್ಲೋನ್ ರೈಲುಗಳು ಸಂಚಾರನಡೆಸುವ ಮಾರ್ಗ, ವಾರಕ್ಕೆ ಎಷ್ಟು ದಿನ ಸಂಚಾರ ಹಾಗೂ ನಿಲ್ದಾಣಗಳ ಮಾಹಿತಿಯನ್ನು ಪ್ರಕಟಿಸಿದೆ.