ಸೆ.೧೮ ಕ್ಕೆ ಹಿಂದೂ ಜನಜಾಗೃತಿ ಸೇನಾ ಸಮಿತಿ ಉದ್ಘಾಟನೆ

ದಾವಣಗೆರೆ. ಸೆ.೧೪; ಹಿಂದೂ ಜನಜಾಗೃತಿ ಸೇನಾ ಸಮಿತಿ ವತಿಯಿಂದ ಸೆ.೧೮ ರಂದು ಬೆಳಗ್ಗೆ  ೧೧ ಕ್ಕೆ ಲೇಬರ್ ಕಾಲೋನಿಯಲ್ಲಿರುವ ರಂಗಂಟಪದಲ್ಲಿ ರಾಜ್ಯಸಮಿತಿ ಸಂಘಟನೆಯ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥಾಪಕ‌ ರಾಜ್ಯಾಧ್ಯಕ್ಷ ಚೇತನ್ ಜಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆಗಮಿಸಲಿದ್ದಾರೆ. ಹಿಂದೂ ರಾಷ್ಟ್ರಸೇನೆ ಅಧ್ಯಕ್ಷ ಮಧುಗಿರಿ‌ಮೋದಿ, ನವ ಭಾರತ ಹಿಂದೂ ದಲಿತ ಸಂಘದ ರಾಜ್ಯಾಧ್ಯಕ್ಷ ಕುಮಾರ ಗರುಡಕೇಸರಿ, ಬೆಂಗಳೂರು ಭಜರಂಗದಳದ ಸಂತೋಷ್ ಕರತಾಳ್,ರಾಜ್ಯ ಮಹಿಳಾ ಘಟಕದ ವೀಣಾ ಕನ್ನಡತಿ ಆಗಮಿಸಲಿದ್ದಾರೆ ಎಂದರು.ಸಂಘಟನೆಯ ಉದ್ಘಾಟನೆ ಹಿನ್ನೆಲೆಯಲ್ಲಿ ಸೆ.೧೬ ರಂದು ಶುಕ್ರವಾರ ಬೆಳಿಗ್ಗೆ ೧೦ ಗಂಟೆಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, ರ್ಯಾಲಿ ನಗರದ ವೆಂಕಟೇಶ್ವರ ವೃತ್ತದಿಂದ  ಆರಂಭವಾಗಿ, ಬಂಬೂಬಜಾರ್, ಭಗತ್ ಸಿಂಗ್ ನಗರ, ನಿಟುವಳ್ಳಿ ೬೦ ಅಡಿ ರಸ್ತೆ, ವಿದ್ಯಾನಗರ, ನೂತನ ಕಾಲೇಜು ರಸ್ತೆ, ಬಿಐಇಟಿ ಕಾಲೇಜು ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತಿ, ಫ್ಲೈ ಓವರ್ ಮೂಲಕ ಹೊಂಡದ ಸರ್ಕಲ್, ಅರುಣ ಟಾಕೀಸ್ ವೃತ್ತ, ರಾಮ್ ಅಂಡ್ ಕೋ ವೃತ್ತ ಎವಿಕೆ ಕಾಲೇಜು ರಸ್ತೆ, ಅಂಬೇಡ್ಕರ್, ಸರ್ಕಲ್ ಮೂಲಕ ಜಯದೇವ ವೃತ್ತದಲ್ಲಿ ಕೊನೆಗೊಳ್ಳುತ್ತದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಶಿಕ್,ಶಕುಂತಲಾ,ಅರವಿಂದ್,ದುಶ್ಯಂತ್ ಇದ್ದರು.