ಸೆ.೧೭ರಿಂದ ಹದಿನೈದು ದಿನ ಸೇವಾ ಪಾಕ್ಷಿಕ -ಲೆಕ್ಕಿಹಾಳ

ಲಿಂಗಸುಗೂರು.ಸೆ.೧೬-ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ನಿಮಿತ್ಯ ಬಿಜೆಪಿ ಪಕ್ಷದ ವತಿಯಿಂದ ಸೆ.೧೭ರಿಂದ ಅ.೦೨ರ ವರೆಗೆ ೧೫ ದಿನಗಳ ಕಾಲ ಸೇವಾ ಪಾಕ್ಷಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸೆಪ್ಟಂಬರ್ ೧೭ರಂದು ೧೦೦ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ರಕ್ತದಾನ ಮಾಡಲಿದ್ದಾರೆ. ಇದರ ಜೊತೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಸೆ. ೨೫ರಂದು ದೀನ್ ದಯಾಳ ಉಪಾದ್ಯಾಯರ ಜಯಂತಿ ನಿಮಿತ್ತ ೧೦ ಸಾವಿರಕ್ಕೂ ಅಧಿಕ ಆಲ, ಅರಳಿ ಮರಗಳ ಸಸಿಗಳನ್ನು ಬೂತ್‌ಮಟ್ಟದಲ್ಲಿ ನೆಡಲಾಗುವುದು. ಈಗಾಗಲೇ ಕಾರ್ಯಕ್ರಮಗಳ ಯಶಸ್ವಿಗೆ ೧೩ ಜನರ ತಂಡ ರಚನೆ ಮಾಡಲಾಗಿದೆ. ಇದರ ಜೊತೆಗೆ ಶಾಲಾ-ಕಾಲೇಜು, ಜನವಸತಿ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅಲ್ಲದೇ ಕ್ಷೇತ್ರದ ಎಲ್ಲಾ ಕಡೆಯೂ ಮೋದಿ ಹುಟ್ಟು ಹಬ್ಬದ ನಿಮಿತ್ತ ಹಲವು ಸೇವಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗಿರಿಮಲ್ಲನಗೌಡ, ಪ್ರಭುಸ್ವಾಮಿ ಅತ್ತನೂರು, ಈಶ್ವರ ವಜ್ಜಲ್, ಜಗನ್ನಾಥ ಕುಲಕರ್ಣಿ, ಹುಲ್ಲೇಶ ಸಾಹುಕಾರ ಇದ್ದರು.