ಸೆ.೧೪ ರಂದು ವಸತಿ ಸಚಿವರ ವಿರುದ್ದ ಶಿವಮೊಗ್ಗದಲ್ಲಿ ಪಿಡಿಓಗಳ ಪ್ರತಿಭಟನೆ

ಶಿವಮೊಗ್ಗ, ಸೆ. ೧೩: ‘ಪಿಡಿಓಗಳು ರಾಕ್ಷಸರಿದ್ದಂತೆ’ ಎಂಬ ವಸತಿ ಸಚಿವ ವಿ. ಸೋಮಣ್ಣರವರ ಹೇಳಿಕೆ ಖಂಡಿಸಿ ಹಾಗೂ ಕ್ಷಮೆಯಾಚನೆಗೆ ಆಗ್ರಹಿಸಿ, ಸೆ.೧೪ ರಂದು ಶಿವಮೊಗ್ಗ ಜಿ.ಪಂ. ಕಚೇರಿ ಎದುರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘವು ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿದೆ.

ಹಾಸನ ಜಿ.ಪಂ. ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ವೇಳೆ, ಪಿಡಿಓಗಳು ರಾಕ್ಷಸರು ಎಂದು ವಸತಿ ಸಚಿವರು ಹೇಳಿದ್ದಾರೆ. ಇದನ್ನು ಸಂಘ ತೀವ್ರ ವಾಗಿ‌ ಖಂಡಿಸುತ್ತದೆ ಎಂದು ಸಂಘದ ಜಿಲ್ಲಾಧ್ಯಕ್ಷ ಶ್ರೀರಾಮ್ ರವರು ತಿಳಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳನ್ನು ಕರ‍್ಯಗತ ಮಾಡುವ ಗುರುತರ ಜವಾಬ್ದಾರಿ ನರ‍್ವಹಿಸುತ್ತಿದ್ದೆವೆ. ಗ್ರಾಮೀಣ ಭಾಗದಲ್ಲಿ ಕೋವಿಡ್-೧೯ ಪಿಡುಗು ನಿಯಂತ್ರಣದಲ್ಲಿಯೂ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೆವೆ. ವಸತಿ ಯೋಜನೆಯಡಿ ಗ್ರಾಮ ಸಭೆ ಆಯ್ಕೆ ಮಾಡುವ ಫಲಾನುಭವಿಗಳಿಗೆ ನಿಯಮಾನುಸಾರ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಆದರೆ ವಸತಿ ಸಚಿವರು ಪಿಡಿಓಗಳ ವಿರುದ್ದ ಪದೆ ಪದೇ ನೀಡುತ್ತಿರುವ ಹೇಳಿಕೆಗಳು ಮಾನಸಿಕ, ನೈತಿಕ ಸ್ಥರ‍್ಯ ಕುಸಿಯುವಂತೆ ಮಾಡುತ್ತಿದೆ. ಸರ‍್ವಜನಿಕರು ನಮ್ಮನ್ನು ಸಂಶಯದಿಂದ ನೋಡುವಂತಾಗಿದೆ. ಸಚಿವರು ತಮ್ಮ ಹೇಳಿಕೆ ಹಿಂಪಡೆದು, ಕ್ಷಮೆಯಾಚಿಸಬೇಕು ಎಂದು ಶ್ರೀರಾಮ್’ರವರು ಆಗ್ರಹಿಸಿದ್ದಾರೆ.ಪಸ್ಥಿತರಿದ್ದರು