
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೨: ಶಿವಶ್ರೀ ಮೀಡಿಯಾ ಪ್ರೈ.ಲಿ. ಹಾಗೂ ರಾಜ್ ನ್ಯೂಸ್, ರಾಜ್ ಮ್ಯೂಸಿಕ್ ವತಿಯಿಂದ ೭೦೦ ವರ್ಷಗಳ ಬಳಿಕ ಲೋಕಕಲ್ಯಾಣಾರ್ಥ ಅಖಿಲ ಭಾರತ ಸಂಪೂರ್ಣ ಮಹಾ ಕುಬೇರ ಯಾಗವನ್ನು ಸೆಪ್ಟೆಂಬರ್ ೧೧ ರಿಂದ ೨೧ ವರೆಗೆ ಬೆಂಗಳೂರು ಅರಮನೆ ಮೈದಾನದ ಆವರಣದಲ್ಲಿರುವ ತ್ರಿಪುರ ವಾಸಿನಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಿವಶ್ರೀ ಮೀಡಿಯಾದ ವಿಶೇಷ ಪ್ರತಿನಿಧಿ ಎಸ್. ಸೋಮಶೇಖರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಮಾರಿ ಕೊರೊನಾ ನಂತರ ಇಡೀ ವಿಶ್ವವೇ ಆರ್ಥಿಕ ಹಿಂಜರಿತಕ್ಕೊಳಗಾಗಿದ್ದು, ಹಿಂದೆಲ್ಲಾ ಆರ್ಥಿಕ ಸಮಸ್ಯೆಯ ನಿವಾರಣೆಗಾಗಿ ಲಕ್ಷ್ಮೀ ಯನ್ನು ಸಂತೃಪ್ತಿ ಪಡಿಸಲು ಕುಬೇರನನ್ನು ಪೂಜಿಸುತ್ತಿದ್ದರು. ಈ ನಿಟ್ಟಿನಲ್ಲಿ ನಾವು ಕುಬೇರ ಯಾಗವನ್ನು ನಡೆಸುತ್ತಿದ್ದೇವೆ ಎಂದರು.ಮುಖ್ಯ ಆಡಳಿತಾಧಿಕಾರಿ ಓಮೇಶ್ ಮೂರ್ತಿ ಮಾತನಾಡಿ, ಅರಮನೆ ಆವರಣದ ೬೦ ಎಕರೆ ಪ್ರದೇಶದಲ್ಲಿ ೨೪ ಗಂಟೆಗಳ ಕಾಲ ಹೋಮ ನಡೆಯಲಿದೆ. ೨೦೮ ಹೋಮಕುಂಡಗಳನ್ನು ನಿರ್ಮಿಸಲಾಗುತ್ತಿದ್ದು, ೫೦೬ ಆಗಮಿಕರು ದೇಶದ ವಿವಿಧ ಭಾಗಗಳಿಂದ ಆಗಮಿಸಲಿದ್ದಾರೆ.ಯಾಗಕ್ಕೆ ಕೂರುವವರು ಒಂದು ಲಕ್ಷದಿಂದ ೫೦೦೦ ರೂಪಾಯಿಗಳವರೆಗಿನ ವಿವಿಧ ಸೇವೆಗಳ ಮೂಲಕ ಸೇವೆ ಸಲ್ಲಿಸಬಹುದು ಎಂದರು. ಹೆಚ್ಚಿನ ಮಾಹಿತಿಗೆ ರಾಜ್ ನ್ಯೂಸ್ ಜಿಲ್ಲಾ ವರದಿಗಾರರಾದ ರಾಮ್ ಪ್ರಸಾದ್-೯೦೬೦೮೦೦೭೭೫, ಬನ್ನಯ್ಯ ಶಾಸ್ತ್ರಿ-೯೯೮೬೯೨೨೦೭೭ ಸಂಪರ್ಕಿಸಲು ರಾಮ್ ಪ್ರಸಾದ್ ತಿಳಿಸಿದರು. ದಾವಣಗೆರೆ ಶ್ರೀಶೈಲ ಮಠದ ಮುಖ್ಯಸ್ಥ ಎಂ. ಬನ್ನಯ್ಯ ಸ್ವಾಮಿ ಮಾತನಾಡಿ, ಯಾಗದ ಯಶಸ್ಸಿಗೆ ಎಲ್ಲಾ ಭಕ್ತರು ಸಹಕರಿಸುವಂತೆ ಹಾಗೂ ಭಾಗವಹಿಸುವಂತೆ ಕೋರಿದರು.