ಸೆ.೧೧ರಂದು ಶಿಕ್ಷಕರ ದಿನಾಚರಣೆ: ಶಂಕರಲಿಂಗಯ್ಯ ಸ್ವಾಮಿ

ದೇವದುರ್ಗ: ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆ ವತಿಯಿಂದ ಸೆ.೧೧ರಂದು ಭಾನುವಾರ ಗಡ್ಡೆಗೂಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹೂವಿನಹೆಡಗಿ ಖಾಸಗಿ ಶಿಕ್ಷಣ ಸಂಸ್ಥೆ ಒಕ್ಕೂಟದಿಂದ ಶಿಕ್ಷಕರ ದಿನಾಚರಣೆ ಆಯೋಜಿಸಲಾಗಿದೆ ಎಂದು ಒಕ್ಕೂಟದ ತಾಲೂಕು ಅಧ್ಯಕ್ಷ ಶಂಕರಲಿಂಗಯ್ಯ ಸ್ವಾಮಿ ದೇವರಗುಡ್ಡ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಇಂದು ಮಾತನಾಡಿದರು.
ಸೆ.೧೧ ಬೆಳಗ್ಗೆ ಶಿಕ್ಷಕರ ವೃತ್ತಿಪರತೆ ಕುರಿತು ಸಂವಾದ, ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಕುರಿತು ಉಪನ್ಯಾಸ ನಡೆಲಿದೆ ಹಾಗೂ ಶಿಕ್ಷಕರಿಗೆ ಸನ್ಮಾನ ಮತ್ತು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ೨೦ ಸಾವಿರ ರೂ.ಬಹುಮಾನವನ್ನ ಕಲ್ಯಾಣ ಮಂಟಪದ ಮಾಲೀಕ ಬಾಲರೆಡ್ಡಿ ತಮ್ಮ ಮಗನ ನೆನಪಿಗಾಗಿ ನೀಡಲಿದ್ದಾರೆ.
ಮಾಜಿ ಸಂಸದ ಬಿ.ವಿ.ನಾಯಕ, ಶಾಸಕ ಶಿವನಗೌಡ, ಬಿಇಒ ಆರ್ ಇಂದಿರಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಶಿಕ್ಷಕರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶರಣು ಹುಣಸಿಗಿ ಜಾಲಹಳ್ಳಿ, ಗಂಗಣ್ಣ ಪೂಜಾರಿ ಕಾಕರಗಲ್, ಸಿದ್ದಯ್ಯ ಸ್ವಾಮಿ, ಬಲಭೀಮ ಹೂಗಾರ್ ಇತರರಿದ್ದರು.