ಸೆ.೧೧ಕ್ಕೆ  ವಿಶ್ವಕರ್ಮ ಕ್ರೆಡಿಟ್ ಸೊಸೈಟಿಯ ರಜತ ಮಹೋತ್ಸವ

ದಾವಣಗೆರೆ.ಸೆ.೯; ವಿಶ್ವಕರ್ಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ.ಸಂಸ್ಥೆ 1997 ರಂದು ಪ್ರಾರಂಭವಾಗಿದ್ದು, ಇದೀಗ ರಜತ ಮಹೋತ್ಸವ ಸಂಭ್ರಮದಲ್ಲಿದೆ ಎಂದು ಸೊಸೈಟಿ ಅಧ್ಯಕ್ಷ ಬಿ.ವಿ. ಶಿವಾನಂದ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದಿನವರೆಗೆ ನಮ್ಮ ಸಂಸ್ಥೆಯು ಸಮಾಜದ ಮತ್ತು ಸೊಸೈಟಿಯ ಗ್ರಾಹಕರಿಗೆ ಎಲ್ಲಾ ರೀತಿಯ ಸೌಕಯಗಳನ್ನು ನೀಡುತ್ತಾ ನಿರಂತರವಾಗಿ 25 ವರ್ಷಗಳ ಸೇವೆ ಸಲ್ಲಿಸುತ್ತಾ ಬಂದಿದೆ ಎಂದರು.ಸೆ. ೧೧ ರ  ಬೆಳಿಗ್ಗೆ ೧೧.೩೦ ನಗರದ ಎಂ ಸಿ ಸಿ ಎ ಬ್ಲಾಕ್ ನಲ್ಲಿರುವ ದಾವಣಗೆರೆ ಹರಿಹರ ಅರ್ಬನ್ ಸಹಕಾರ ಸಮುದಾಯ ಭವನದಲ್ಲಿ ರಜತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಸಂಸ್ಥೆಯಲ್ಲಿ ೩,೫೦೦ ಶೇರುದಾರರಿದ್ದು, ಠೇವಣಿ, ಸಾಲ, ಎಸ್ ಬಿ ಖಾತೆ, ಪಿಗ್ಮಿ, ಸೌಲಭ್ಯಗಳನ್ನು ಒದಗಿಸುತ್ತಿದ್ದು,  ಉತ್ತಮ ಲಾಭ ಹೊಂದಿದೆ.  ಸದಸ್ಯರುಗಳಿಗೆ ಪ್ರತಿ ವರ್ಷವು ಲಾಭಾಂಶವನ್ನು ಹಂಚಿಕೆ ಮಾಡಿದೆ. ಸಂಸ್ಥೆ ಸ್ವಂತ ಕಟ್ಟಡ ಹೊಂದಿದೆ.  ಸಂಸ್ಥೆಯ ಸದಸ್ಯರುಗಳ ಇಚ್ಚೆಯಂತೆ ಎಲ್ಲರ ಪ್ರಯತ್ನದಿಂದ  ಸ್ಥಿರಾಸ್ತಿಯನ್ನು ಸಹ ಹೊಂದಿರುತ್ತೇವೆ. ಸಂಸ್ಥೆಯನ್ನು ಮುಂದಿನ ದಿನಗಳಲ್ಲಿ ಬ್ಯಾಂಕ್ ಆಗಿ ಪರಿವರ್ತಿಸಲು ಆಡಳಿತ ಮಂಡಳಿಯು ಉತ್ಸುಕವಾಗಿದೆ ಎಂದು ತಿಳಿಸಿದರು.ರಜತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷ ಬಿ.ವಿ. ಶಿವಾನಂದ್  ವಹಿಸಲಿದ್ದು,   ಶಾಮನೂರು ಶಿವಶಂಕರಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ.  ಮುಖ್ಯ ಅತಿಥಿಗಳಾಗಿ  ಜಿ.ಎಂ. ಸಿದ್ದೇಶ್ವರ್, ಎಸ್.ಎ. ರವೀಂದ್ರನಾಥ್,  ಸಹಕಾರ ಸಂಘಗಳ ಇಲಾಖೆ ಉಪ ನಿಬಂಧಕರಾದ ಅನ್ನಪೂರ್ಣ, ದೂಡಿ ಅಧ್ಯಕ್ಷ  ಕೆ.ಎಂ. ಸುರೇಶ್ ಆಗಮಿಸುವರು .ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷ ವಿಜಯಕುಮಾರ್, ನಿರ್ದೇಶಕರುಗಳಾದ ಬಿ ನಾಗೇಂದ್ರಾಚಾರ್ ಬಸಾಪುರ, ಬಿ ಸಿದ್ದಾಚಾರ್ ,  ಎಸ್. ನಾಗರಾಜಾಚಾರ್, ಎನ್ ‘ ಪೂರ್ವಾಚಾರ್ , ವಿ . ಎಂ . ಕೊಟ್ರೇಶಾಚಾರ್ ,  ಮಂಜುನಾಥಚಾರ್ , ಸಿ.ಆರ್. ಬಡಿಗೇರ್ ಉಪಸ್ಥಿತರಿದ್ದರು.