ರಾಯಚೂರು,ಜು.೨೭- ರಕ್ತಾಕ್ಷ ಚಲನಚಿತ್ರದ ಪ್ರಮೋಷನ್ ವರ್ಕ ಭರದಿಂದ ಸಾಗಿದ್ದು ಸೆಪ್ಟಂಬರ್ ಕೊನೆಯ ವಾರ ಇಲ್ಲವೇ ಅಕ್ಚೋಬರ್ ಮೊದಲ ವಾರದಲ್ಲಿ ಬಿಡುಗಡೆಗೆ ಸಿದ್ದವಾಗಲಿದೆ ಎಂದು ಚಿತ್ರದ ನಾಯಕ ನಟ ಹಾಗೂ ನಿರ್ಮಾಪಕ ರೋಹಿತ್ ಮುದಗಲ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಉತ್ತರ ಕರ್ನಾಟಕದ ಪ್ರತಿಭೆಗಳು ಸೇರಿ ಸಾಯಿ ಪ್ರೋಡಕ್ಷನ್ ಅಡಿಯಲ್ಲಿ ಒಂದು ಮನೋರಂಜನಾತ್ಮಕ,ರೋಮಾಂಚನಕಾರಿ ಸಿನಿಮಾವನ್ನು ತಯಾರಿಸಿದ್ದು ಸೇಡಿನ ಕಥೆಯನ್ನು ಕುತೂಹಲಕಾರಿಯಾಗಿ ಹೆಣೆಯಲಾಗಿದ್ದು ಚಿತ್ರಕ್ಕಾಗಿ ೨ ಕೋಟಿ ಖರ್ಚಾಗಿದೆ. ಕಾರಂತದ ಪ್ರಮೋದಶೆಟ್ಟಿ ವಿಲನ್ ಆಗಿ ನಟಿಸಿದ್ದಾರೆ.ವಾಸುದೇವ ನಿರ್ದೇಶಿಸಿದ್ದಾರೆ. ಸಾಹಸ ಸ್ಟಂಟ್ ಶಿವ ಇವರದ್ದಾಗಿದ್ದು,ಅರ್ಚನಾ ಕೊಟಗಿ ಸೇರಿದಂತೆ ನಾಲ್ಕು ಜನ ಹಿರೋಯಿನ್ ಗಳಿದ್ಗಾರೆ ಎಂದರು.
ಈ ಸಂದರ್ಭದಲ್ಲಿ ಬದ್ರಿ ನಾರಾಯಣ, ಅಭಿವರ್ಧನ, ಪ್ರಭು, ಬಸವರಾಜ,ಶಶಿ,ವಿಶ್ವ ಸೇರಿದಂತೆ ಇತರರು ಉಪಸ್ಥಿತರಿದ್ದರು.