ಸೆಸ್ಪನ್ಸ್ ಹಾರರ್ ಕಥನ

ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ಹೆಸರಿಡದ ಚಿತ್ರದ ಸ್ಕ್ರಿಪ್ಟ್ ಪೂಜೆ  ನಡೆಯಿತು. ಕಿರುತೆರೆಯ ನಟ ದರ್ಶನ್ ನಾಯಕನಾಗಿ ಹಿರಿತೆರೆಗೆ ಪ್ರವೇಶ ಮಾಡುತ್ತಿದ್ದಾರೆ.

ಮಿಲನಪ್ರಕಾಶ್, ಟಿ.ಎಸ್.ನಾಗಭರಣ ಸೇರಿ ಹಲವ ಬಳಿ  ಕೆಲಸ ಮಾಡಿರುವ  ಧರ್ಮ ನಿರ್ದೇಶನ ಮಾಡುತ್ತಿದ್ದಾರೆ. ವರದರಾಜು  ಬಂಡವಾಳ ಹೂಡುತ್ತಿದ್ದಾರೆ. ನಾಯಕಿ ಮಿಕ್ಕಂತೆ ಕಲಾವಿದರು, ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ಶುರುವಾಗಿದೆ.

ಸೆಸ್ಪೆನ್ಸ್ ಹಾರರ್ ಕಥೆಯಾಗಿದೆ. ನಾಲ್ಕು ಹುಡುಗ ಹುಡುಗಿಯರು ಎಸ್ಟೇಟ್‌ವೊಂದಕ್ಕೆ ಹೋಗಿ ದಿನದ ಮಟ್ಟಿಗೆ ತಂಗುತ್ತಾರೆ. ನಂತರ ಅಲ್ಲಿ ವಿಚಿತ್ರ ಘಟನೆಗಳು ಸಂಭವಿಸುತ್ತವೆ. ಕೆಲವರು ಹೊರಗೆ ಬಂದರೆ, ಮಿಕ್ಕವರು ಬರುವುದಕ್ಕೆ ಆಗುವುದಿಲ್ಲ. ಅದಕ್ಕೆ ಕಾರಣವಾದರೂ ಏನು ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ.  ಡಿಸೆಂಬರ್ ಕೊನೆವಾರ ಮಹೂರ್ತದ ಬಳಿಕ ಚಿತ್ರದ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ.