ಸೆಸ್ಕ್ ಅಧಿಕಾರಿಗಳ ಎದುರು ಸಿಎಂ ವಿರುದ್ಧ ರೈತರ ಆಕ್ರೋಶ: ಲೋಡ್ ಶೆಡ್ಡಿಂಗ್‍ಗೆ ಕಿಡಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.13:- ಅನಿಯಮಿತ ಲೋಡ್ ಶೆಡ್ಡಿಂಗ್ ವಿರುದ್ಧಆಕ್ರೋಶಗೊಂಡರೈತರುಇಂದು ದಿಢೀರನೇಚಾಮರಾಜನಗರ ಸೆಸ್ಕ್‍ಕಚೇರಿಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಸೆಸ್ಕ್‍ಅಧಿಕಾರಿಗಳ ಎದುರು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರತಿಭಟನಾಕಾರರು ಹಿಗ್ಗಾಮುಗ್ಗಾ ತರಾಟೆಗೆತೆಗೆದುಕೊಂಡರು.
ಮಾದನಾಯ್ಕ ಎಂಬವರು ಮಾತನಾಡಿ, ಓಟು ಕೇಳುವಾಗ ಇಬ್ರುಜೋಡೆತ್ತು ನಿಂತಂಗೆ ನಿಂತಿದ್ದರು, ಇಂದುಅವರು ಬರ್ತಾರಾ, ಅವರಅಪ್ಪ ಬರ್ತಾರಾ..? 200 ಯೂನಿಟ್ ಫ್ರಿಕರೆಂಟ್‍ಕೊಡ್ತಿವಿ ಅಂತಓಟು ಹಾಕಿಸಿಕೊಂಡು ಗೆದ್ದು ಬಿಟ್ಟು ಈಗ ನೋಡಿದರೆ ಊಟ ಮಾಡೋಟೈಮಿಗೆಕರೆಂಟ್‍ಇರಲ್ಲ, ಮಕ್ಕಳು ಓದೋವಾಗಕರೆಂಟ್ ಇರಲ್ಲ, ರೈತರ ಮಕ್ಕಳು ಎಲ್ಲಿಗೆ ಹೋಗಬೇಕು ಎಂದುಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆರಕ್ಷಣೆಕೊಡದಿದ್ದರೆ ಮುಂದೆತೊಂದರೆ ಅನುಭವಿಸಬೇಕಾಗುತ್ತೆ, ಇಲ್ಲಿನ ಪರಿಸ್ಥಿತಿಯನ್ನ ಮಿನಿಸ್ಟರ್ ಗಮನಕ್ಕೆ ತರಬೇಕು, ನಮ್ಮಿಂದಅವರು- ಅವರಿಂದ ನಾವಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸೆಸ್ಕ್ ಅಧಿಕಾರಿಗಳು ಸಮರ್ಪಕ ವಿದ್ಯುತ್‍ಒದಗಿಸುವ ಭರವಸೆ ನೀಡಿದ ನಂತರರೈತರು ಪ್ರತಿಭಟನೆ ಹಿಂತೆಗೆದುಕೊಂಡರು.