ಸೆಸ್ಕ್ ಅಧಿಕಾರಿಗಳಿಗೆ ಶಾಸಕ ಕೆ ಮಹದೇವ್‍ರಿಂದ ತರಾಟೆ

ಪಿರಿಯಾಪಟ್ಟಣ.ಜೂ.05: ಸಾರ್ವಜನಿಕವಾಗಿ ರೈತರ ಪರವಾಗಿ ಕೆಲಸ ಮಾಡಲು ಇರುವ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ನಾನು ಅಧಿಕಾರದಲ್ಲಿ ಇದ್ದರೆ ಏನು ಪ್ರಯೋಜನ ಎಂದು ಶಾಸಕ ಕೆ ಮಹದೇವ್ ಸೆಸ್ಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಇಲಾಖೆ ಎಂಜಿನಿಯರ್ಗಳು ಮತ್ತು ಸಿಬ್ಬಂದಿಗಳ ಸಭೆಯನ್ನು ನಡೆಸಿ ಇಲಾಖೆಯಿಂದ ಮಾಹಿತಿ ಪಡೆದು ಮಾತನಾಡಿದರು ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ವ್ಯಾಪಕ ದೂರುಗಳು ಬರುತ್ತಿದ್ದು ಇದರಿಂದ ಇಲಾಖೆಗೂ ಕೆಟ್ಟ ಹೆಸರು ನನಗೂ ಕೆಟ್ಟ ಹೆಸರು ಎಂದು ಬೇಸರ ವ್ಯಕ್ತಪಡಿಸಿದರು. ನಾನು ಕೇಳುವ ವಿವರಣೆಗೆ ಗೊಂದಲಕಾರಿ ಉತ್ತರ ನೀಡಬಾರದು ಇದರಿಂದ ಅಪಹಾಸ್ಯಕ್ಕೀಡಾಗುತ್ತೀರಿ ಎಂದು ಎಚ್ಚರಿಸಿದರು. ಕಾನೂನಿಗೆ ವಿರುದ್ಧವಾಗಿ ರೈತರಿಗೆ ಸಹಾಯ ಮಾಡಿ ಎಂದು ನಾನು ಹೇಳುತ್ತಿಲ್ಲ ಆದರೆ ನಿಮ್ಮ ಕಟ್ಟಳೆಗಳನ್ನು ಮೀರಿ ರೈತರಿಗೆ ಸಹಾಯ ಮಾಡುವ ಮನಸ್ಸು ನಿಮಗೆ ಬರಬೇಕು ಎಂದು ತಿಳಿಸಿದರು ರೈತರ ಜಮೀನುಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕೊಡಿ ಎಂದರೆ ಒಂದು ಲಕ್ಷಕ್ಕೂ ಅಧಿಕ ಹಣ ಬೇಕಾಗುತ್ತದೆ ಎಂದು ರೈತರನ್ನು ಹೆದರಿಸುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸೆಸ್ಕ್ ಇಇ ಚಂದ್ರಶೇಖರ್ 20ರಿಂದ 30 ಸಾವಿರ ಹಣ ಖರ್ಚಾಗಲಿದೆ ಎಂದು ಸ್ಪಷ್ಟಪಡಿಸಿದರು. ತಾಲೂಕಿನ ರೈತರಿಗೆ ಕಾನೂನಿನ ಪಾಲನೆ ನೆಪದಲ್ಲಿ ಹಿಂಸೆ ಕೊಟ್ಟು ರೈತರು ಅನಾಹುತದ ದಾರಿ ಹಿಡಿದರೆ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ನಿಮ್ಮ ಜೀವಿಗಳಿಗೆ ಈ ಬಗ್ಗೆ ಪೂರ್ಣ ಮಾಹಿತಿ ನೀಡಿ ರೈತರಿಗೆ ಅನುಕೂಲ ಮಾಡಿಕೊಳ್ಳುವುದು ಹೇಗೆ ಎಂದು ಸೂಚಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ರೈತರ ಐಪಿ ಸೆಟ್ಟುಗಳಿಗೆ ಪ್ರತಿದಿನ 7 ವಿದ್ಯುತ್ ನೀಡಲು ನಿಮಗೆ ಏನು ಸಮಸ್ಯೆ ಎಂದು ಪ್ರಶ್ನಿಸಿದರು ಈ ಸಂದರ್ಭದಲ್ಲಿ ಜೆಇ ಒಬ್ಬರು ಉತ್ತರಿಸಿ ವಿದ್ಯುತ್ ಪೂರೈಕೆ ಕೇಂದ್ರದಿಂದ ಸಮಸ್ಯೆ ಯಾಗಿದ್ದಲ್ಲಿ ಅಥವಾ ವಿದ್ಯುತ್ ತಂತಿಯ ಮೇಲೆ ಮರದ ಕೊಂಬೆಗಳು ಬಿದ್ದು, ಮತ್ತಿತರ ತಾಂತ್ರಿಕ ಸಮಸ್ಯೆಗಳಿಂದ ಮಾತ್ರ ಊರಕೇರಿ ವ್ಯತ್ಯಯವಾಗುತ್ತದೆ ಇಲ್ಲದಿದ್ದಲ್ಲಿ ನಿಗದಿತವಾಗಿ 7:00 ಪೂರೈಕೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಕುಡಿಯುವ ನೀರು ಪೂರೈಕೆ ಯೋಜನೆಗೆ ಶೀಘ್ರ ವಿದ್ಯುತ್ ಕಲ್ಪಿಸಿ ಮತ್ತು ರೈತರುಗಳಿಗೆ ಹೆಚ್ಚುವರಿಯಾಗಿ ಟ್ರಾನ್ಸ್ಫಾರ್ಮರ್ ಗಳು ಬೇಕಿದ್ದಲ್ಲಿ ಹಿರಿಯ ಅಧಿಕಾರಿಗಳ ಬಳಿ ನಾನು ಮಾತನಾಡಲು ಸಿದ್ದವಿದ್ದೇನೆ ಎಂದರು.
ಸಭೆಯಲ್ಲಿ ತಾಪಂ ಇಒ ಕೃಷ್ಣಕುಮಾರ್, ಸೆಸ್ಕ್ ಎಇಇಗಳಾದ ಅನಿಲ್, ಕುಮಾರ್ ಸೇರಿದಂತೆ 10 ಉಪವಿಭಾಗಗಳ ಜೆಇ ಗಳು ಹಾಜರಿದ್ದರು.