ಸೆಲ್ವಂ ಮನವಿ ತಿರಸ್ಕಾರ ಎಡಪ್ಪಾಡಿ ಹಾದಿ ಸುಗಮ

ಚೆನ್ನೈ,.ಮಾ.೨೮- ಎಐಎಡಿಎಂಕೆ ನಾಯಕ ಪನ್ನೀರ್ ಸೆಲ್ವಂ ತಂಡದ ಮನವಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದ ಪರಿಣಾಮ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಎಐಎಡಿಎಂಕೆ ಮುಖ್ಯಸ್ಥರಾಗಿ ಮುಂದುವರಿಯಲು ಇದ್ದ ಅಡೆ ತಡೆ ನಿವಾರಣೆಯಾಗಿದೆ.
೨೦೨೨ರ ಜುಲೈ ೧೧ ರ ಸಾಮಾನ್ಯ ಮಂಡಳಿಯಲ್ಲಿ ಅಂಗೀಕರಿಸಿದ ನಿರ್ಣಯಗಳನ್ನು ಪ್ರಶ್ನಿಸಿ ಪನ್ನೀರಸೆಲ್ವಂ ಬಣ ಸಲ್ಲಿಸಿದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಪಳನಿಸ್ವಾಮಿ ಬಣದ ಕೈ ಮೇಲುಗೈ ಅಗಿದ್ದು ಎಐಎಡಿಎಂಕೆ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ.ಪಕ್ಷದ ಜುಲೈ ೧೧ ರ ಸಾಮಾನ್ಯ ಮಂಡಳಿಯ ನಿರ್ಣಯಗಳ ವಿರುದ್ಧ ಪದಚ್ಯುತ ಎಐಎಡಿಎಂಕೆ ನಾಯಕ ಓ ಪನ್ನೀರಸೆಲ್ವಂ ಮತ್ತು ಅವರ ಸಹಾಯಕರು ಸಲ್ಲಿಸಿದ ಮನವಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ,
ನ್ಯಾಯಾಲಯದ ತೀರ್ಪಿನಿಂದ ಹಂಗಾಮಿ ಮುಖ್ಯಸ್ಥ ಕೆ ಪಳನಿಸ್ವಾಮಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ, ಉನ್ನತ ಹುದ್ದೆಗೆ ಕೂರಿಸಲು ಇದ್ದ ಕಾನೂನು ತೊಡಕು ನಿವಾರಣೆಆಗಿದೆ
ಎಐಎಡಿಎಂಕೆ ಪರ ವಕೀಲ ಐಎಸ್ ಇನ್ಬದುರೈ, ಪಕ್ಷದ ಪ್ರಧಾನ ಕಾರ್ಯದರ್ಶಿ ಚುನಾವಣೆಯ ನಡವಳಿಕೆ ಸೇರಿದಂತೆ ಎಲ್ಲಾ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ ಎಂದು ಹೇಳಿದ್ದಾರೆ.
ಎಐಎಡಿಎಂಕೆ ಪರ ವಕೀಲ ಐಎಸ್ ಇನ್ಬದುರೈ ಅವರು, ಪಕ್ಷದ ಪ್ರಧಾನ ಕಾರ್ಯದರ್ಶಿ ಚುನಾವಣೆಯ ನಡವಳಿಕೆ ಸೇರಿದಂತೆ ಎಲ್ಲಾ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.
“ಪನ್ನೀರ್‌ಸೆಲ್ವಂ ಮತ್ತು ಇತರರು ೨೦೨೨ ಜುಲೈ ೧೧ರ ನಿರ್ಣಯಗಳ ವಿರುದ್ಧ ಮನವಿ ಸಲ್ಲಿಸಿದರು. ಅದನ್ನು ತಿರಸ್ಕರಿಸಲಾಗಿದೆ. ಇದರರ್ಥ ಸಾಮಾನ್ಯ ಮಂಡಳಿಯು ಮಾನ್ಯವಾಗಿದೆ, ಅದರ ನಿರ್ಣಯಗಳು ಮಾನ್ಯವಾಗಿವೆ” ಎಂದು ಹೇಳಿದ್ದಾರೆ.ಇತ್ತೀಚೆಗೆ ನಡೆದ ಪಕ್ಷದ ಸಾಂಸ್ಥಿಕ ಸಮೀಕ್ಷೆಗಳ ಫಲಿತಾಂಶ ಪ್ರಕಟಿಸುವುದಿಲ್ಲ ಎಂದು ಪಕ್ಷ ನ್ಯಾಯಾಲಯಕ್ಕೆ ಹೇಳಿಕೆ ನೀಡಿತ್ತು ಎಂದು ನೆನಪಿಸಿಕೊಂಡ ಅವರು, ಪ್ರಧಾನ ಕಾರ್ಯದರ್ಶಿ ಸ್ಥಾನದ ಚುನಾವಣೆಯನ್ನು ಉಲ್ಲೇಖಿಸಿ ಪಳನಿಸ್ವಾಮಿ ಅವರನ್ನು ಪಕ್ಷದ ಮುಖ್ಯಸ್ಥರಾಗಿದ್ದಾರೆ ಎಂದು ಹೇಳಿದ್ದಾರೆ.
ನ್ಯಾಯಾಲಯದ ತೀರ್ಪಿನಿಂದ ಪಳನಿಸ್ವಾಮಿ ಬೆಂಬಲಿಗರು ಇಲ್ಲಿನ ಎಐಎಡಿಎಂಕೆ ಪ್ರಧಾನ ಕಛೇರಿಯಲ್ಲಿ ಪಟಾಕಿ ಸಿಡಿಸಿ, ತೀರ್ಪನ್ನು ಸ್ವಾಗತಿಸಿ ಸಿಹಿ ಹಂಚಿ ಸಂಭ್ರಮಿಸಿದರು.ಪಳನಿಸ್ವಾಮಿ ಅವರು ಪಕ್ಷದ ಪ್ರಧಾನ ಕಚೇರಿಗೆ ಭೇಟಿ ನೀಡಿ ಎಐಎಡಿಎಂಕೆ ದಿವಂಗತರಾದ ಎಂಜಿ ರಾಮಚಂದ್ರನ್ ಮತ್ತು ಜೆ ಜಯಲಲಿತಾ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು.