ಸೆಲ್ಫಿ ತೆಗೆಯುವ ವೇಳೆ ನೀರು ಪಾಲಾದ ಯುವಕ!

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಆ. 12: ಶಿವಮೊಗ್ಗ ತಾಲೂಕಿನ ಗಾಜನೂರಿನ ತುಂಗಾ ಜಲಾಶಯದ ಪವರ್ ಹೌಸ್ ಬಳಿಸೆಲ್ಫಿ ತೆಗೆದುಕೊಳ್ಳುವ ವೇಳೆ, ಯುವಕನೋರ್ವ ನೀರು ಪಾಲಾಗಿರುವ ಘಟನೆ ನಡೆದಿದೆ.
ಮಿಳಘಟ್ಟ ಬಡಾವಣೆ ನಿವಾಸಿ ಹರೀಶ್ (26) ನೀರು ಪಾಲಾದ ಯುವಕ ಎಂದು ಗುರುತಿಸಲಾಗಿದೆ.ಕಳೆದ ಗುರುವಾರ ಸಂಜೆ ಘಟನೆ ನಡೆದಿದೆ.ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯ ಈಜುಗಾರರು ಯುವಕನಿಗಾಗಿ ಶೋಧನಡೆಸುತ್ತಿದ್ದಾರೆ. ಆದರೆ ಯುವಕನ ಸುಳಿವು ಲಭ್ಯವಾಗಿಲ್ಲ. ಇಂದೂ ಕೂಡ ಯುವಕನ ಶೋಧಕಾರ್ಯಾಚರಣೆ ನಡೆಸಲಾಗುತ್ತಿದೆ.ಸ್ನೇಹಿತರ ಜೊತೆ ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಸಂಬಂಧತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.