ಸೆಲ್ಫಿ ಗೀಳಿಗೆ ಯುವಕ ಬಲಿ

ಶಿವಮೊಗ್ಗ,ಆ.೧೨: ಶಿವಮೊಗ್ಗ ತಾಲೂಕಿನ ಗಾಜನೂರಿನ ತುಂಗಾ ಜಲಾಶಯದ ಪವರ್ ಹೌಸ್ ಬಳಿ ಸೆಲ್ಫಿ ತೆಗೆದುಕೊಳ್ಳುವ ವೇಳೆ, ಯುವಕನೋರ್ವ ನೀರು ಪಾಲಾಗಿರುವ ಘಟನೆ ನಡೆದಿದೆ.ಮಿಳಘಟ್ಟ ಬಡಾವಣೆ ನಿವಾಸಿ ಹರೀಶ್ (೨೬) ನೀರು ಪಾಲಾದ ಯುವಕ ಎಂದು ಗುರುತಿಸಲಾಗಿದೆ.ಕಳೆದ ಗುರುವಾರ ಸಂಜೆ ಘಟನೆ ನಡೆದಿದೆ.ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯ ಈಜುಗಾರರು ಯುವಕನಿಗಾಗಿ ಶೋಧ ನಡೆಸುತ್ತಿದ್ದಾರೆ. ಆದರೆ ಯುವಕನ ಸುಳಿವು ಲಭ್ಯವಾಗಿಲ್ಲ. ಇಂದೂ ಕೂಡ ಯುವಕನ ಶೋಧ
ಕಾರ್ಯಾಚರಣೆ ನಡೆಸಲಾಗುತ್ತಿದೆ.ಸ್ನೇಹಿತರ ಜೊತೆ ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.