ಸೆಲ್ಫಿಯಲ್ಲಿ ಸೆರೆಯಾದ ಒಂದೇ ಕುಟುಂಬದ ೩೮ ಮತದಾರರು

ಸಂಜೆವಾಣಿ ವಾರ್ತೆ

ದಾವಣಗೆರೆ,ಮೇ.8: ಲೋಕಸಭಾ ಚುನಾವಣೆ ನಡೆಯುತ್ತಿದ್ದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಎಂಸಿಸಿ ಎ. ಬ್ಲಾಕ್  ಬಕ್ಕೇಶ್ವರ ಪ್ರೌಢಶಾಲೆ ಮತಗಟ್ಟೆಯಲ್ಲಿ ಒಂದೇ ಕುಟುಂಬದ ೩೮ ಜನ  ಮತದಾನ ಮಾಡಿ ಸೆಲ್ಫಿ ಹಂಚಿಕೊಂಡಿದ್ದಾರೆ. ಸೆಲ್ಫಿ ಯಲ್ಲಿ ಸೆರೆಯಾದವರು ಹಿರಿಯ ಪತ್ರಕರ್ತರು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿಯ ಸದಸ್ಯರಾದ ಕೆ.ಚಂದ್ರಣ್ಣ ಹಾಗೂ ಅವರ ಸಹೋದರ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರು ಹಾಗೂ ಶಿವಮೊಗ್ಗ ಮಲೆನಾಡು ವಾಣಿ ಕನ್ನಡ ದಿನಪತ್ರಿಕೆ ಸಂಪಾದಕರಾದ ಕೆ. ಏಕಾಂತಪ್ಪ ಅವರ ಸಹೋದರರು, ಸಹೋದರಿಯರು,  ಕುಟುಂಬ ವರ್ಗದವರು, ಮಕ್ಕಳು ಸೇರಿದಂತೆ ಸುಮಾರು 38 ಜನ ಮತದಾರರು ಒಟ್ಟು ಕುಟುಂಬದ ಸದಸ್ಯರು, ಒಟ್ಟಾಗಿ ಬಂದು ಸರತಿ ‌ಸಾಲಿನಲ್ಲಿ ಮತದಾನ ಮಾಡಿ ಸೆಲ್ಫಿಯಲ್ಲಿಯು ಒಟ್ಟು ಕುಟುಂಬವಾಗಿದ್ದಾರೆ.