ಸೆಲೆಬ್ರಿಟಿಗಳ ಮೂಲಕ ಜಾಗೃತಿ

ಮೈಸೂರು: ಏ.30: ಮೈಸೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಈ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಮೂಲಕ ಜಾಗೃತಿ ಮೂಡಿಸಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ.
ಮೈಸೂರು ನಾಗರೀಕರಿಗೆ ವ್ಯಾಕ್ಸಿನ್ ಹಾಗೂ ಟೆಸ್ಟಿಂಗ್ ಸೆಂಟರ್ ಗಳ ಕುರಿತು ಸೆಲೆಬ್ರಿಟಿಗಳಿಂದ ಅರಿವು ಮತ್ತು ಜಾಗೃತಿ ಮೂಡಿಸಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದ್ದು ಪಾಲಿಕೆ ಕಾರ್ಯಕ್ಕೆ ಮೈಸೂರು ಜಿಲ್ಲಾಡಳಿತ ಸಾಥ್ ನೀಡಿದೆ. ನಟ ಅನಿರುದ್ಧ್ ಹಾಗೂ ನಟಿ ರೋಷಿಣಿ ಪ್ರಕಾಶ್ ಅವರಯ ಕೊರೊನಾ ಲಸಿಕೆ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಜಿಲ್ಲಾಡಳಿತ ಹಾಗೂ ಪಾಲಿಕೆ ವತಿಯಿಂದ ನಡೆಸಲಾಗುತ್ತಿರುವ ಕೋವಿಡ್ ವ್ಯಾಕ್ಸಿನ್ ಹಾಗೂ ಟೆಸ್ಟಿಂಗ್ ಸೆಂಟರ್ ಗಳ ಸೌಲಭ್ಯ ಪಡೆಯುವಂತೆ ಸಾರ್ವಜನಿಕರಿಗೆ ನಟ ಅನಿರುದ್ಧ್ ಹಾಗೂ ನಟಿ ರೋಷಿಣಿ ಪ್ರಕಾಶ್ ಮನವಿ ಮಾಡಿದ್ದಾರೆ. ಅರ್ಹರೆಲ್ಲರೂ ಕೋವಿಡ್ ಲಸಿಕೆ ತೆಗೆದುಕೊಂಡು ಸುರಕ್ಷಿತರಾಗಿರುವಂತೆ ಮೈಸೂರು ನಾಗರೀಕರಿಗೆ ಸ್ಯಾಂಡಲ್‍ವುಡ್ ನಟ, ನಟಿಯರು ಮನವಿ ಮಾಡಿದ್ದಾರೆ.