ಸೆಲೆಕ್ಷನಿಂದ ಎಲೆಕ್ಷನ್ ವರೆಗೆ ವ್ಯವಸ್ಥಿತವಾದ ನಡೆ:ನಾಸೀರ್ ಹುಸೇನ್

ಬಳ್ಳಾರಿ, ಮೇ.01: ಅಭ್ಯರ್ಥಿಗಳ ಸೆಲೆಕ್ಷನಿಂದ ಎಲೆಕ್ಷನ್ ವರೆಗೆ ಎಲ್ಲಾ ಹಂತದ ಕಾರ್ಯಗಳಲ್ಲಿ ಪಕ್ಷದ ವ್ಯವಸ್ಥಿತವಾದ ನಡೆಯಿಂದ ಪಾಲಿಕೆ ಚುನಾವಣೆಯಲ್ಲಿ ವಿಜಯ ಸಾಧಿಸಲಾಯಿತೆಂದು ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಹೇಳಿದರು.
ಅವರಿಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಆರಂಭದಿಂದಲೂ ಪಕ್ಷದ ಪರ ಅಲೆ ಇತ್ತು. ಪಾಲಿಕೆ ಚುನಾವಣೆಯ ಪ್ರಚಾರದಲ್ಲಿ ಮತದಾರರಿಗೆ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತ ಮುಗಿದ ಮೇಲೆ ನಗರ ಶಾಸಕರಿಂದ ಕೇವಲ ಪರ್ಸೆಂಟ್ ಆಡಳಿತ ನಡೆಸಿದರು.
ಅಭಿವೃದ್ಧಿ ಮರೀಚಿಕೆಯಾಗಿದ್ದು, ಅಸ್ವಚ್ಛತೆ, ಒಳ ಚರಂಡಿ ಸಮಸ್ಯೆ ಮೊದಲಾದವುಗಳ ಬಗ್ಗೆ ತಿಳಿಸಿದ್ದಲ್ಲದೇ ರಾಷ್ಟ್ರೀಯ ವಿಚಾರಗಳಾದ ಸಿ.ಎ.ಎ. ಕಾನೂನು ಜಾರಿಗೆ, ರಾಜ್ಯ ಸರ್ಕಾರದ ವಿಫಲತೆ, ಬಳ್ಳಾರಿ ಜಿಲ್ಲೆ ವಿಭಜನೆ, ಮೊದಲಾದವುಗಳ ಬಗ್ಗೆಯೂ ಮತದಾರರಿಗೆ ಬಿಜೆಪಿ ಮಾಡಿದ ವಂಚನೆ ಕುರಿತು ತಿಳಿಸಿ ಮತದಾರರು ಮತ್ತಷ್ಟು ಕಾಂಗ್ರೆಸ್ ಬೆಂಬಲಿಸಲು ಕಾರಣವಾಯ್ತು ಎಂದರು.
ಚುನಾವಣೆಯಲ್ಲಿ ಸಹಕರಿಸಿದವರನ್ನು ಸ್ಮರಿಸಿದರು. ಸುದ್ದಿಗೋಷ್ಠಿಯಲ್ಲಿ ನಗರ ಜಿಲ್ಲಾ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ಸಂಚಾಲಕ ಆಂಜನೇಯಲು, ಮುಖಂಡರುಗಳಾದ ಮುಂಡರಗಿ ನಾಗರಾಜ್, ರವಿಕುಮಾರ್, ಭಾಸ್ಕರ್ ರೆಡ್ಡಿ, ಕಾಂತಿನೋಹ ವಿಲ್ಸನ್, ಹರ್ಷದ್ ಅಹಮ್ಮದ್ ಮೊದಲಾದವರು ಇದ್ದರು.