ಸೆರೆ ಸಿಕ್ಕ ಚಿರತೆ ಮರಿ

ತಿ.ನರಸೀಪುರ: ಮೇ.25:- ತಾಲೂಕಿನ ಬೂದಳ್ಳಿ ಗ್ರಾಮದಲ್ಲಿ ಮತ್ತೊಂದು ಚಿರತೆ ಮರಿ ಸೆರೆ ಸಿಕ್ಕಿದ್ದು, ಅರಣ್ಯ ಇಲಾಖೆ ಇಟ್ಟಿದ ಬೋನಿಗೆ ಬಿದ್ದಿದೆ. ಸೆರೆ ಸಿಕ್ಕ ಚಿರತೆ ಮರಿಯನ್ನು ಮೈಸೂರಿನ ವಲಯ ಅರಣ್ಯಧಿಕಾರಿ ಕಚೇರಿಗೆ ರವಾನಿಸಲಾಗಿದೆ.
ತಾಲೂಕಿನ ಬೂದಳ್ಳಿ ಗ್ರಾಮದ ಅನ್ವರ್ ಪಾಷ ಎಂಬುವರ ಜಮೀನಿನಲ್ಲಿ ಸುಮಾರು 3 ವರ್ಷದ ಹೆಣ್ಣು ಚಿರತೆ ಮರಿ ಸೆರೆ ಸಿಕ್ಕಿದ್ದು, ಚಿರತೆ ಓಡಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕ ಮೇರೆಗೆ ಅರಣ್ಯ ಇಲಾಖೆಯು ಚಿರತೆ ಸೆರೆಗೆ ಅನ್ವರ್ ಪಾಷ ಜಮೀನಿನಲ್ಲಿ ಬೋನು ಇರಿಸಿತ್ತು.ಮಂಗಳವಾರ ರಾತ್ರಿ ಸುಮಾರು 11ಘಂಟೆ ಸಮಯದಲ್ಲಿ ಚಿರತೆ ಮರಿ ಬೋನಿಗೆ ಬಿದ್ದಿರಬಹುದು ಎಂದು ಹೇಳಲಾಗುತ್ತಿದೆ.
ಚಿರತೆ ಸೆರೆ ಸಿಕ್ಕ ವಿಷಯ ತಿಳಿದ ತಕ್ಷಣ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಚಿರತೆ ಮರಿಯನ್ನು ಮೈಸೂರಿಗೆ ರವಾನಿಸಲಾಯಿತು. ಸ್ಥಳದಲ್ಲಿ ಉಪ ಅರಣ್ಯಾಧಿಕಾರಿ ಮಂಜುನಾಥ್, ನಾಗರಾಜು, ಲೋಕೇಶ್ ಹಾಜರಿದ್ದರು.