`ಸೆರಾಕೇರ್’ನಲ್ಲಿ ಮಕರ ಸಂಕ್ರಾಂತಿ

ಕಲಬುರಗಿ:ಜ.14: ಅಪ್ಪ-ಅಮ್ಮಂದಿರ ಆರೋಗ್ಯ ಕಾಳಜಿ ಹಾಗೂ ಉಚಿತ ಎಕ್ಸಸೈಜ್ ಥೆರಪಿ ಕೇಂದ್ರ ಸೆರಾಕೇರ್'ನಲ್ಲಿ ಶನಿವಾರ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕಳೆದ ಆರು ವರ್ಷಗಳಿಂದ ಬಡವರು ಸೇರಿದಂತೆ ಎಲ್ಲಾ ವರ್ಗದ ಜನರಲ್ಲಿನ ದೀರ್ಘಕಾಲದ ರೋಗಗಳ ನಿವಾರಣೆ ಹಾಗೂ ರೋಗವಿಲ್ಲದ ಜೀವನ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಸೆರಾಕೇರ್‌ನ ಕಾರ್ಯವನ್ನು ಹಲವಾರು ಹಿರಿಯರು ಈ ಸಂದರ್ಭದಲ್ಲಿ ಶ್ಲಾಘಿಸಿದರು. ಎಳ್ಳು-ಬೆಲ್ಲವನ್ನು ವಿತರಿಸುವ ಮೂಲಕ ಸಂಕ್ರಾಂತಿಯ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ಪ್ರಾಂಶುಪಾಲ ಡಾ.ವಿಶ್ವನಾಥ ಚಿಮಕೋಡ ಮಾತನಾಡಿ, ನಾನೂ ಕೂಡಾ ಸೆರಾಕೇರ್‌ನ ಫಲಾನುಭವಿ. ಆರೋಗ್ಯಕರ, ಉಲ್ಲಾಸ ಭರಿತ ಜೀವನ ನನಗೆ ಇಲ್ಲಿ ದೊರಕಿದೆ. ಸಕ್ಕರೆ ಕಾಯಿಲೆ, ಅಸ್ತಮಾ, ಬೆನ್ನು ನೋವು, ಕತ್ತು ನೋವು, ರಕ್ತದೊತ್ತಡ, ನರಗಳ ದೌರ್ಬಲ್ಯ ಸೇರಿದಂತೆ ಮೊದಲಾದ ಕಾಯಿಲೆಗಳಿಗೆ ಔಷಧಿ ಇಲ್ಲದೆ ಉಚಿತವಾಗಿ ಥೆರಪಿ ಮೂಲಕ ಗುಣಪಡಿಸಲು ಶ್ರಮಿಸುತ್ತಿರುವ ಇಲ್ಲಿನ ಸಿಬ್ಬಂದಿಗಳ ಕಾರ್ಯ ಮೆಚ್ಚುವಂತದ್ದು. ಮನೆಯಲ್ಲಿನ ಮಕ್ಕಳಿಗಿಂತಲೂ ಹೆಚ್ಚಿನ ಪ್ರೀತಿ ತೋರಿಸಿ, ರೋಗಗಳ ನಿವಾರಣೆ ಮಾಡಿ ಅವರಲ್ಲಿ ಅತ್ಮಸ್ಥೈರ್ಯ ತುಂಬುತ್ತಿರುವ ಕಾರ್ಯವನ್ನು ಶ್ಲಾಘಿಸಿದರು. ಆರೋಗ್ಯಕರ ಹಾಗೂ ಹೆಚ್ಚು ಕಾಲ ಬದುಕುವಂತಾಗಲು ತಂಬಾಕು, ಸೀಗರೆಟು ಬಿಡಬೇಕು. ಮದ್ಯಪಾನದಿಂದ ದೂರವಿರಬೇಕು. ಮಕ್ಕಳಿಗೆ ಉತ್ತಮವಾದ ಸಂಸ್ಕಾರ ನೀಡಬೇಕು. ತನು-ಮನ-ಧನ ಶುದ್ಧವಾಗಿಸಿಕೊಳ್ಳಬೇಕು. ದ್ವೇಷ ರಹಿತ ಜೀವನ ಸಾಗಿಸಬೇಕು. ಗುರು-ಹಿರಿಯರಲ್ಲಿ ಗೌರವ ಇರಬೇಕು. ಪ್ರತಿನಿತ್ಯ ತಂದೆ-ತಾಯಿಯ ಆಶೀರ್ವಾದ ಪಡೆಯಬೇಕು. ಸಕಾರಾತ್ಮಕ ಚಿಂತನೆಗಳೊಂದಿಗೆ, ಯೋಗಾಸನ, ವ್ಯಾಯಾಮ, ಧ್ಯಾನದೊಂದಿಗೆ ಶಾಂತಿಯುತ ಜೀವನ ಸಾಗಿಸಬೇಕು ಎಂದು ಕಿವಿಮಾತು ಹೇಳಿದರು. ಸೆರಾಕೇರ್ ಕೇಂದ್ರದ ವ್ಯವಸ್ಥಾಪಕ ರಮೇಶ್ ಎಸ್. ಮಾತನಾಡಿ, ರಾಜ್ಯದ ೩೦ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಸೆರಾಕೇರ್ ಕಾರ್ಯ ನಿರ್ವಹಿಸುತ್ತಿದೆ. ನೈಸರ್ಗಿಕ ಚಿಕಿತ್ಸೆ ಮೂಲಕ ಅವರಲ್ಲಿನ ರೋಗವನ್ನು ನಿವಾರಣೆ ಮಾಡಲಾಗುತ್ತದೆ. ಲಕ್ಷಾಂತರ ಜನರು ಇದರ ಲಾಭ ಪಡೆದುಕೊಂಡು ಗುಣಮುಖರಾಗಿದ್ದಾರೆ ಎಂದು ಹೇಳಿದರು. ಕಲಬುರಗಿಯಲ್ಲಿ ಕಳೆದ ಆರು ವರ್ಷಗಳಿಂದ ಕಾರ್ಯನಿರ್ವಹಿತ್ತಾ ಸಾವಿರಾರು ಬಡ ಜನರ ದೀರ್ಘಕಾಲದ ರೋಗ ನಿವಾರಣೆಗೆ ಶ್ರಮಿಸಲಾಗಿದೆ. ಬಿ.ಪಿ., ಶುಗರ, ಮೊಳಕಾಲು ನೋವು, ಬೆನ್ನು ನೋವು, ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಅನೇಕ ತೊಂದರೆಗಳಿಗೆ ಚಿಕಿತ್ಸೆ ನೀಡಿ, ಗುಣಮುಖರನ್ನಾಗಿ ಮಾಡಲಾಗಿದೆ. ಇಲ್ಲಿನ ಸೇವೆಯನ್ನು ಮೆಚ್ಚಿ ನಮ್ಮ ಸೇವಾ ಕೇಂದ್ರಕ್ಕೆಇಂಡಿಯಾ ಬೆಸ್ಟ್ ಸರ್ವಿಸ್ ಸೆಂಟರ್’ ಪ್ರಶಸ್ತಿ ಕೂಡಾ ದೊರಕಿದೆ. ಮುಂದಿನ ದಿನಗಳಲ್ಲಿ ಕಲಬುರಗಿಯಲ್ಲಿ ಇನ್ನೊಂದು ಕೇಂದ್ರ ಸ್ಥಾಪನೆಗೆ ಚಿಂತನೆ ನಡೆದಿದೆ. ಹೆಚ್ಚಿನ ಅಪ್ಪ-ಅಮ್ಮಂದಿರಿಗೆ ಉಚಿತ ಸೇವೆ ಒದಗಿಸಿ, ಅವರ ಆರೋಗ್ಯ ಕಾಪಾಡಿ, ಅರೋಗ್ಯಕರ ಸಮಾಜ ನಿರ್ಮಾಣ ಮಾಡುವುದೇ ನಮ್ಮ ಪ್ರಮುಖ ಉದ್ದೇಶ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಕಸ್ಟಮರ್ ಸಫೋರ್ಟ್ ಎಕ್ಸಿಕ್ಯೂಟಿವ್ ದಯಾನಂದ, ಸಿಬ್ಬಂದಿಗಳಾದ ಪವಿತ್ರ, ಲಕ್ಷ್ಮಿ, ಶುಷ್ಮ, ಶೋಭಾ, ಪವಿತ್ರಾ, ರಶ್ಮಿತಾ, ಗುಲ್ಜಾರ್, ರೋಹಿತ್ ಹಾಗೂ ವಸಂತಗೌಡ್, ಕಮಲ್ ಪಾಶಾ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.