ಸೆಮಿ ಲಾಕ್ ಘೋಷಣೆ: ಬಿಕೋ ಎನ್ನುತ್ತಿರುವ ಸುಪರ ಮಾರುಕಟ್ಟೆ

ಕಲಬುರಗಿ,ಏ.21- ಕೋವಿಡ-19 ಎರಡನೆ ಅಲೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಂದಿನಿಂದ 14 ದಿನಗಳ ಕಾಲ ಸರ್ಕಾರ ಘೋಷಿಸಿದ ಸೆಮಿ ಲಾಕ್ ಕಫ್ರ್ಯೂ ಹಿನ್ನಲೆಯಲ್ಲಿ ಇಲ್ಲಿನ ಸುಪರ ಮಾರುಕಟ್ಟೆ ಜನ ಸಂದಣಿ ಇಲ್ಲದೇ ಬಿಕೋ ಎನ್ನುತ್ತಿರುವ ದೃಷ್ಯ ಕಂಡು ಬಂದಿತು.
ಇಂದು ರಾತ್ರಿ 9ರಿಂದ ರಾಜ್ಯಾದ್ಯಂತ ನೈಟ್ ಕಫ್ರ್ಯೂ ಮತ್ತು ವಾರದ ಶನಿವಾರ ಮತ್ತು ಭಾನುವಾರ ಎರಡು ದಿನಗಳಕ ಫುಲ್ ಕಫ್ರ್ಯೂ ಸೇರಿದಂತೆ ಕೆಲವು ಕಟ್ಟು ನಿಟ್ಟಿನ ನಿಯಮವಳಿ ಜಾರಿ ಮಾಡಿರುವ ಹಿನ್ನಲೆಯಲ್ಲಿ ಮಹಾನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಸುಪರ ಮಾರುಕಟ್ಟೆಯಲ್ಲಿ ಜನರ ಓಡಾಟಕ್ಕೆ ಬ್ರೇಕ್ ಬಿದ್ದ ಪರಿಣಾಮವಾಗಿ ಬಿಕೋ ಎನ್ನುವಂತಾಯಿತ್ತು.
ಸಾರ್ವಜನಿಕರಿಲ್ಲದೇ ಆಟೋಗಳು ಇಲ್ಲಿ ಸಾಲು ಸಾಲಾಗಿ ನಿಂತಿರುವ ದೃಷ್ಯಗಳು ಕಂಡು ಬಂದಿತು. ದೇವಸ್ಥಾನ, ಮಸೀದಿ ಮತ್ತು ಚರ್ಚ್ ಗಳಲ್ಲಿ ದಿನ ನಿತ್ಯದ ಸೀಮಿತ ಆರಾಧನೆಗಾಗಿ ಮಾತ್ರ ಅವಕಾಶ ಕಲ್ಪಿಸಿರುವುದರಿಂದ ಸುಪರ ಮಾರುಕಟ್ಟೆಯ ಪ್ರಮುಖ ಮಸೀದಿಯಲ್ಲಿ ನಮಾಜಿಗಳ ಸಂಖ್ಯೆಯಲ್ಲಿಯೂ ಇಳಿಕೆ ಕಂಡು ಬಂದಿತು.
ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಯಾವುದೇ ಅಡೆತಡೆಗಳು ಇಲ್ಲದಿದ್ದರೂ, ಸಾರ್ವಜನಿಕರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲದೇ ಅನಗತ್ಯ ಜನರ ಓಡಾಟಕ್ಕೂ ಬ್ರೇಕ್ ಬಿದ್ದಿರುವುದು ಸಂತಸದ ವಿಷಯ.