
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.07: ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆ ವತಿಯಿಂದ ಪದವಿ ಪರೀಕ್ಷೆಗಳನ್ನು ನಡೆಸಲು ವಿ.ಎಸ್.ಕೆ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕುಲಸಚಿವರು ಎಸ್.ಸಿ ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು.
ಎಐಡಿಎಸ್‍ಓ ಜಿಲ್ಲಾ ಸೆಕ್ರಟರಿಯೇಟ್ ಸದಸ್ಯರಾದ ಸಿದ್ದು ಮಾತನಾಡಿ… ಪ್ರಸ್ತುತ ಸೆಮಿಸ್ಟರ್ ತರಗತಿಗಳು ಆರಂಭವಾಗಿ 7 ತಿಂಗಳುಗಳು ಕಳೆದಿವೆ. ಆದರೂ ರಾಜ್ಯದ ಯಾವುದೇ ವಿಶ್ವವಿದ್ಯಾಲಯದಲ್ಲಿ ಈಗಾಗಲೇ ನಡೆಯಬೇಕಿದ್ದ ಸೆಮಿಸ್ಟರ್ ಪರೀಕ್ಷೆಗಳು ನಡೆದಿಲ್ಲ ಮತ್ತು ಹಲವು ವಿಶ್ವವಿದ್ಯಾಲಯಗಳು ಇನ್ನೂ ಪರೀಕ್ಷಾ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಿಲ್ಲ. ಇದರಿಂದ ರಾಜ್ಯದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಇದು ಹೀಗೆಯೇ ಮುಂದುವರೆದರೆ, ಮುಂದಿನ ಶೈಕ್ಷಣಿಕ ವರ್ಷದ ಮೇಲೆ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಒಂದೆಡೆ, ಸ್ವಾಯತ್ತ ವಿಶ್ವವಿದ್ಯಾಲಯಗಳು ತಮ್ಮ ಸೆಮಿಸ್ಟರ್ ಪರೀಕ್ಷೆಗಳನ್ನು ಮುಗಿಸಿಕೊಂಡು ಮುಂದಿನ ಸೆಮಿಸ್ಟರ್ ಅನ್ನು ಆರಂಭಿಸಿದ್ದಾರೆ. ಇನ್ನೊಂದೆಡೆ ವಿ.ಎಸ್.ಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೆಮಿಸ್ಟರ್ ತರಗತಿಗಳು ಜನವರಿ ಮೂರನೇ ವಾರದಲ್ಲಿ ಮುಗಿಸಿಕೊಂಡು ಒಂದುವರೆ ತಿಂಗಳಿನಿಂದ ಪರೀಕ್ಷೆಗಾಗಿ ಕಾಯುತ್ತಾ ಕುಳಿತಿದ್ದಾರೆ. ಆದರೆ ಇತ್ತೀಚೆಗೆ ವಿ.ಎಸ್.ಕೆ ವಿಶ್ವವಿದ್ಯಾಲಯು ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿಯು ಇದೇ ಮಾರ್ಚ್ 20ರಿಂದ ಹಾಗೂ ಎನ್.ಇ.ಪಿ ಬ್ಯಾಚ್ ಅವರಿಗೆ ಏಪ್ರಿಲ್ 4,5ರಿಂದ ನಡೆಸಲಾಗುವುದು ಎಂದು ಪ್ರಕಟಗೊಂಡಿದೆ. ಆದರೆ ಅಂತಿಮ ವೇಳಾಪಟ್ಟಿ ಪ್ರಕಟವಾಗುವುದು ಯಾವಾಗ? ಪರೀಕ್ಷ ನಡೆಸಲು ಸೆಮಿಸ್ಟರ್ ತರಗತಿಗಳು ಮುಗಿದು ಎರಡು ತಿಂಗಳು ಬೇಕೆ…! ಇದು ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಅಸಮತೋಲನವನ್ನು ಸೃಷ್ಟಿ ಮಾಡುತ್ತಿದೆ. ಇದರೊಂದಿಗೆ, ಚುನಾವಣೆ ಬರುವ ಹಿನ್ನೆಲೆಯಲ್ಲಿ ಏಪ್ರಿಲ್ ಮಧ್ಯ ಭಾಗದ ನಂತರ ಯಾವುದೇ ಪರೀಕ್ಷೆಗಳನ್ನು ನಡೆಸಬಾರದು ಎಂದು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಚುನಾವಣೆ ಮುಗಿದು ಮೇ ನಂತರದಲ್ಲಿ ಪರೀಕ್ಷೆ ನಡೆಸುವುದು ಎಂದಾದರೆ, ಅದು ಮುಂದಿನ ಸೆಮಿಸ್ಟರ್‍ಗೆ ತೊಂದರೆ ಆಗುವುದು ಮಾತ್ರವಲ್ಲ, ಒಟ್ಟಾರೆ ಶೈಕ್ಷಣಿಕ ರಚನೆಯೇ ಕುಸಿಯುತ್ತದೆ. ಮುಂದಿನ ವರ್ಷದ ದಾಖಲಾತಿ, ವಿದ್ಯಾರ್ಥಿವೇತನ, ಹಾಸ್ಟೆಲ್ ವ್ಯವಸ್ಥೆ ಎಲ್ಲವೂ ಅಸ್ತವ್ಯಸ್ತವಾಗುತ್ತದೆ. ಹಾಗಾದಾಗ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತು ಅವರ ಶೈಕ್ಷಣಿಕ ಜೀವನವು ದೊಡ್ಡ ಅಪಾಯದಲ್ಲಿ ಸಿಲುಕುತ್ತದೆ.
ಈ ಸಮಸ್ಯೆಯ ಅಗಾಧತೆಯನ್ನು ಅರಿತು, ವಿ.ಎಸ್.ಕೆ ವಿಶ್ವವಿದ್ಯಾಲಯು ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಈ ಕೂಡಲೇ ಬಿಡುಗಡೆ ಮಾಡಿ, ಈ ತಿಂಗಳ ಒಳಗೆ ಪರೀಕ್ಷೆಗಳು ನಡೆಯುವಂತೆ ಕ್ರಮ ವಹಿಸಬೇಕು ಮತ್ತು ಕುಲಪತಿಗಳು ನಿರ್ದೇಶನವನ್ನು ನೀಡಬೇಕು ಎಂದು ಂIಆSಔ ಹಾಗೂ ಪದವಿ ವಿದ್ಯಾರ್ಥಿಗಳು ಮನವಿ ಎಂದರು.
ಈ ಸಂದರ್ಭದಲ್ಲಿ ಎಐಡಿಎಸ್‍ಓ ಜಿಲ್ಲಾ ಸೆಕ್ರಟರಿಯೇಟ್ ಸದಸ್ಯರು ನಿಹಾರಿಕ, ಮತ್ತು ವಿದ್ಯಾರ್ಥಿಗಳಾದ ವಿಶಾಲ ಮತ್ತಿತರು ಭಾಗವಹಿಸಿದ್ದರು.