ಸೆಪ್ಟೆಂಬರ್ ನಲ್ಲಿ `ತಾಜ್ ಮಹಲ್ 2′

” ತಾಜ್ ಮಹಲ್ -2 “ಚಿತ್ರ ಬಿಡುಗಡೆ ದಿನಾಂಕ‌ವನ್ನು ತಂಡ ಪ್ರಕಟಿಸಿದೆ.ನಾಯಕ  ದೇವರಾಜ್ ಕುಮಾರ್ ಚಿತ್ರಕ್ಕೆ ನಿರ್ದೇಶನವನ್ನೂ ಮಾಡಿದ್ದು  ಸೆಪ್ಟೆಂಬರ್ 2 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಚಿತ್ರದ ಬಿಡುಗಡೆ ದಿನಾಂಕ  ಪ್ರಕಟಿಸಿ  ಶುಭ ಹಾರೈಸಿದರು. ಈ ವೇಳೆ ಮಾತಿಗಿಳಿದ ದೇವರಾಜ್ ಕುಮಾರ್, ಕೊರೋನದಿಂದ ಚಿತ್ರ  ವಿಳಂಬವಾಯಿತು. ಇತ್ತೀಚೆಗೆ ಹಾಡೊಂದನ್ನು  ಜವಳಿ ಸಚಿವ ಶಂಕರ್ ಪಾಟೀಲ್ ಬಿಡುಗಡೆ ಮಾಡಿದ್ದರು. ಆ ಹಾಡು ಐದು ಲಕ್ಷಕ್ಕೂ ಅಧಿಕ ವೀಕ್ಷಣೆಯಾಗಿದೆ. ಟ್ರೇಲರ್ ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ನೈಜಘಟನೆ ಆಧರಿಸಿ‌ದ ಚಿತ್ರ. ತಮಿಳುನಾಡಿನ‌ ಕೊಯಮತ್ತೂರಿನಲ್ಲಿ ನಡೆದ  ಘಟನೆ ಆಧರಿಸಿ ಚಿತ್ರ ಮಾಡಲಾಗಿದೆ. ಸಂವೃದ್ದಿ ಶುಕ್ಲ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶೋಭರಾಜ್ ಬಲ ನಾಣಿ,ಸೇರಿ ಹಲವು ಕಲಾವಿದರಿದ್ದಾರೆ ಎನ್ನುವ ವಿವರ ನೀಡಿದರು.

ನಿರ್ಮಾಪಕ ಉಮೇಶ್ ಬಣಕಾರ್,  ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಶಿಲ್ಪ ಶ್ರೀನಿವಾಸ್,ಮತ್ತಿತರು ಶುಭಹಾರೈಸಿದರು. ಚಿತ್ರದಲ್ಲಿ ಕಾಕ್ರೋಜ್ ಸುಧಿ,ವಿಕ್ಚರಿ ವಾಸು, ರಾಜದೇವ್ ಹಾಗೂ ಹಾಡು ಬರೆದಿರು ಮನ್ವರ್ಷಿ ನವಲಗುಂದ ಇದ್ದರು.