ಸೆಪ್ಟೆಂಬರ್ ನಲ್ಲಿ ಎರಡನೇ ಲಸಿಕೆ ಕೊವಾಕ್ಸ್ : ಆಧಾರ್ ಪುನಾವಾಲ

ಮುಂಬೈ,ಮಾ.27- ಕೋರೋನೊ ಸೊಂಕಿಗೆ ಕೋವಿಶೀಲ್ಡ್ ಲಸಿಕೆ ಅಭಿವೃದ್ಧಿ ಪಡಿಸಿಸಿರುವ ಭಾರತೀಯ ಸೆರಂ ಸಂಸ್ಥೆ ಸೆಪ್ಟೆಂಬರ್ ವೇಳೆಗೆ ಮತ್ತೊಂದು ಲಸಿಕೆ ಬಿಡುಗಡೆ ಮಾಡಲು ಮುಂದಾಗಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಂಸ್ಥೆಯ ಮುಖ್ಯಸ್ಥ ಆಧಾರ್ ಪೂನಾವಾಲ್ ಅವರು, ಸೆಪ್ಟೆಂಬರ್ ವೇಳೆಗ ಎರಡನೇ ಲಸಿಕೆ ಬಿಡುಗಡೆ ಮಾಡಲಿದ್ದು ಇದರಿಂದ ಸೋಂಕಿತರಿಗೆ ಅನುಕೂಲವಾಗಲಿದೆ ಎಂದರು .

ಅಮೇರಿಕಾದ ಔಷದ ತಯಾರಿಕಾ ಸಂಸ್ಥೆ ಮತ್ತು ಭಾರತೀಯ ಸೆರಂ ಸಂಸ್ಥೆ ಸಹಯೋಗದೊಂದಿಗೆ ಕೊವಾಕ್ಸ್ ಲಸಿಕೆಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಆಪ್ರಿಕಾ ಮತ್ತು ಅಮೇರಿಕಾದಲ್ಲಿ ಈಗಾಗಲೇ ಕೊವಾಕ್ಸ್ ಲಸಿಕೆಯನ್ನು ಪ್ರಯೋಗ ಮಾಡಲಾಗಿದೆ . ಈಗಾಗಲೇ ಶೇ.89 ರಷ್ಟು ಪ್ರಗತಿ ಕಂಡಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಆಕ್ಸ್‌ಫರ್ಡ್ ಮತ್ತು ಆಸ್ಟ್ರಾಝೆನೆಕಾ ಸಂಸ್ಥೆ ಸಹಯೋಗಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು ವಿಶ್ವದ ಅನೇಕ ದೇಶಗಳಿಗೆ ನೀಡಲಾಗಿದೆ ಎಂದು ಹೇಳಿದರು.

ಇಂಗ್ಲೆಂಡ್ ನಲ್ಲಿ ಕೋವಾಕ್ಸ್ ಲಸಿಕೆ ಶೇ.96 ರಷ್ಟು ಪ್ರಗತಿ ಕಂಡಿದೆ.ಸೆಪ್ಟೆಂಬರ್ ವೇಳೆಗೆ ಭಾರತದಲ್ಲಿ ಲಸಿಕೆಯನ್ನು ಬಿಡುಗಡೆ ಮಾಡುವ ಉದ್ದೇಶವೊಂದಲಾಗಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಕೊರೋನಾ ಸೋಂಕು ಪ್ರಕರಣ ಗಣನೀಯವಾಗಿ ಹೆಚ್ಚಳವಾಗುತ್ತದೆ.ಇದು ಸಹಜವಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆತಂಕಕ್ಕೆ ಸಿಲುಕಿಸಿದೆ