ಸೆಪ್ಟಿಕ್ ಟ್ಯಾಂಕ್ ಅಳವಡಿಕೆಗೆ ಆಗ್ರಹ

ರಾಯಚೂರು, ಏ.೧೦- ನಗರದ ವಾರ್ಡ ನಂ ೨೯ ರಲ್ಲಿ ಸೆಪ್ಟಿಕ್ ಟ್ಯಾಂಕ್ ಅಳವಡಿಸಿ ಮತ್ತು ಸಿ.ಸಿ.ರಸ್ತೆ ನಿರ್ಮಾಣ ಮಾಡುವಂತೆ ಶಾಂತಿ ಕ್ರಾಂತಿ ಸಂಸ್ಕೃತಿ ಪ್ರಗತಿಯತ್ತ ಜನಪರ ಸಮತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ನಗರದ ವಾರ್ಡ ನಂ ೨೯ ರಲ್ಲಿ ಬರುವ ಎಲ್.ಬಿ.ಎಸ್. ನಗರ ಬಡಾವಣೆಯಲ್ಲಿ ಸೆಪ್ಪಿಂಕ್ ಟ್ಯಾಂಕ್ ಅಳವಡಿಸಿದೇ ನಿರ್ಲಕ್ಷ ವಹಿಸುವದರಿಂದ ಕಲುಷಿತ ನೀರು ಕಾಲುವೆಗೆ ಹರಿಯುತ್ತಿದೆ. ಇದರಿಂದ ದುರ್ವಾಸನೆ, ಸೊಳೆಗಳು ಉತ್ಪತ್ತಿಯಾಗಿ ಸಾಂಕ್ರಮಿಕ ರೋಗಗಳು ಹರಡುವದರಿಂದ ಬಡಾವಣೆ ನಿವಾಸಿಗಳು ಭಯಭೀತರಾಗಿದ್ದರೆ
ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸೇಫ್ಟಿಕ್ ಟ್ಯಾಂಕ್ ಅಳವಡಿಸಿ ಜೊತೆಗೆ ಸಿಸಿ ರಸ್ತೆ ನಿರ್ಮಾಣ ಮಾಡಬೇಕು ಇಲ್ಲವಾದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಶ್ರೀನಿವಾಸ್, ಅರವಿಂದ, ರಮೇಶ, ಸೇರಿದಂತೆ ಉಪಸ್ಥಿತರಿದ್ದರು.