
ನವದೆಹಲಿ,ಆ.1- ದೇಶದಲ್ಲಿ ಆಗಸ್ಟ್ ತಿಂಗಳಲ್ಲಿ ಮಳೆ ದುರ್ಬಲವಾಗಲಿದೆ. ಆದರೂ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ವರ್ಷದ ಮುಂಗಾರಿನ ದ್ವಿತೀಯಾರ್ಧದಲ್ಲಿ ಆಗಸ್ಟ್‌ನಿಂದ ಸೆಪ್ಟೆಂಬರ್‌ವರೆಗೆ ಮಳೆ ಸಾಮಾನ್ಯವಾಗಿರಬಹುದು, ಆದರೆ ಆಗಸ್ಟ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬೀಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಹವಾಮಾನ ಇಲಾಖೆ ಮುಖ್ಯಸ್ಥ ಮೃತ್ಯುಂಜಯ್ ಮೊಹಾಪಾತ್ರ ಅವರು ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಮಳೆ ಸಾಮಾನ್ಯವಾಗಿರಬಹುದು .ದೀರ್ಘಾವಧಿಯ ಸರಾಸರಿ ಶೇ. 94 ರಿಂದ 106 ರಷ್ಟು ಮಳೆ ಬೀಳಲಿದೆ. ಆದರೆ ಆಗಸ್ಟ್‌ನಲ್ಲಿ, ದೇಶಾದ್ಯಂತ ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆಯಿದ್ದು, ಸುಮಾರು ಶೇ.92 ರಷ್ಟು ಇರುತ್ತದೆ ಎಂದು ಅವರು ಹೇಳಿದ್ದಾರೆ.
ಮುನ್ಸೂಚನೆಯಂತೆ ಪೂರ್ವ ಮತ್ತು ಈಶಾನ್ಯ ಭಾರತದ ಅನೇಕ ಭಾಗಗಳಲ್ಲಿ ಸಾಮಾನ್ಯದಿಂದ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಸೂಚಿಸುತ್ತದೆ .ಅಲ್ಲಿ ಮಳೆ ಕೊರತೆಯು ಅಧಿಕವಾಗಿದೆ . ಪೂರ್ವ-ಮಧ್ಯ ಭಾರತ ಮತ್ತು ಹಿಮಾಲಯದ ಉದ್ದಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಮಳೆಯಾಗಲಿದೆ ಎಂದು ಹೇಳಲಾಗಿದೆ
ದಕ್ಷಿಣ ಭಾರತದಲ್ಲಿ, ವಾಯುವ್ಯದ ಪಶ್ಚಿಮ ಭಾಗಗಳಲ್ಲಿ ಮತ್ತು ಸಾಮಾನ್ಯಕ್ಕಿಂತ ಕಡಿಮೆ ಮಳೆಯನ್ನು ನಿರೀಕ್ಷಿಸಲಾಗಿದೆ.ಮಹಾರಾಷ್ಟ್ರದ ಪ್ರದೇಶಗಳು ಸೇರಿದಂತೆ ದಕ್ಷಿಣ ಭಾರತ, ವಾಯುವ್ಯ ಮತ್ತು ಮಧ್ಯ ಭಾರತದ ಪಶ್ಚಿಮ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯನ್ನು ನಿರೀಕ್ಷಿಸಲಾಗಿದೆ. ಎರಡು ತಿಂಗಳಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ಮಳೆ ಸಾಮಾನ್ಯದಿಂದ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ ಎಂದು ಹೇಳಿದ್ದಾರೆ.
ಜುಲೈ ತಿಂಗಳಿನಲ್ಲಿ ದೇಶದಲ್ಲಿ ಸಾಮಾನ್ಯಕ್ಕಿಂತ ಶೇ. 13 ಕ್ಕಿಂತ ಹೆಚ್ಚು ಮಳೆಯಾಗಿದೆ. ಆದರೆ ಋತುವಿನಲ್ಲಿ ಒಟ್ಟಾರೆ ಮುಂಗಾರು ಕಾರ್ಯಕ್ಷಮತೆಯು ಸಾಮಾನ್ಯಕ್ಕಿಂತ ಶೇ. 5ಕ್ಕಿಂತ ಕಡಿಮೆ ಇದೆ ಎಂದು ಅವರು ತಿಳಿಸಿದ್ದಾರೆ.
ಆಗಸ್ಟ್ 5 ರಿಂದ ಕ ಮಧ್ಯದವರೆಗೆ ದೇಶದಲ್ಲಿ ಮಳೆ ಅನುಕೂಲಕರವಾಗಿಲ್ಲದಿರಬಹುದು, ಇದು ಆಗಸ್ಟ್ ಮೊದಲಾರ್ಧದಲ್ಲಿ ಭಾರತದ ಕೆಲವು ಭಾಗಗಳಲ್ಲಿ ಮಳೆಯ ಚಟುವಟಿಕೆಯನ್ನು ಕಡಿಮೆ ಬೀಳಲಿದೆ ಎಂದಿದ್ದಾರೆ.
ಇತ್ತೀಚಿನ ವಿಸ್ತೃತ ಶ್ರೇಣಿಯ ಮುನ್ಸೂಚನೆಯು ಮಧ್ಯ ಮತ್ತು ಪರ್ಯಾಯ ಭಾರತದಲ್ಲಿ ಆಗಸ್ಟ್ 5 ರಿಂದ ಆಗಸ್ಟ್ 17 ರವರೆಗೆ ಕಡಿಮೆ ಮಳೆಯ ಚಟುವಟಿಕೆಯನ್ನು ಸೂಚಿಸುತ್ತದೆ, ಈ ಅವಧಿ ಮುಂಗಾರು ಮಳೆ ಬೀಳಬಹುದು ಎಂದು ಅಂದಾಜು ಮಾಡಲಾಗಿದೆ.