ಸೆಪ್ಟಂಬರ್ ತಿಂಗಳಲ್ಲಿ ಶುಷ್ಕ ವಾತಾವರಣ ಮುಂದುವರಿಕೆ: ಹೆಚ್ಚಿದ ಆತಂಕ

ನವದೆಹಲಿ,ಸೆ.15-ದೇಶದ ಹಲವು ಭಾಗಗಳಲ್ಲಿ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಸೆಪ್ಟಂಬರ್ ತಿಂಗಳಲ್ಲಿ ಅತ್ಯಂತ ಶುಷ್ಕ ವಾತಾವರಣ ಇರಲಿದೆ .ಇದರಿಂದ ಆತಂಕ ಹೆಚ್ಚಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ,

ಈಶಾನ್ಯ ರಾಜ್ಯದಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 3 ರಿಂದ 4 ಡಿಗ್ರಿ ಸೆಲ್ಸಿಯಸ್ ಹೆಚ್ಚುತ್ತಿದೆ ಮತ್ತು ಉತ್ತರ ಮತ್ತು ವಾಯುವ್ಯ ರಾಜ್ಯಗಳಲ್ಲಿ 1 ರಿಂದ 4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಹೀಗಾಗಿ ಈ ತಿಂಗಳು ಕೂಡ ಶಷ್ಕ ವಾತಾವರಣದಿಂದ ಕೂಡಿರಲಿದೆ ಎಂದು ಹೇಳಿದೆ.

ದೇಶಾದ್ಯಂತ ಮಳೆಯ ಕೊರತೆಯಿಂದ ಬಿಸಿಗಾಳಿ ವಾತಾರಣ ಹೆಚ್ಚಾಗಲಿದೆ. ಅದು ಈ ತಿಂಗಳ ಮೊದಲ ಎರಡು ವಾರಗಳಲ್ಲಿ ಕಂಡು ಬಂದಿದೆ, ಮುಂದಿನ ಎರಡು ವಾರಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.

ಈ ಅವಧಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಶಿಷ್ಟವಾದ ಮುಂಗಾರು ತಣ್ಣನೆಯ ವಾತಾವರಣಕ್ಕಿಂತ ಸೆಪ್ಟೆಂಬರ್‍ನ ಮೊದಲ ಎರಡು ವಾರಗಳು ಭಾರತದ ವಿವಿಧ ಪ್ರದೇಶಗಳಲ್ಲಿ, ವಿಶೇಷವಾಗಿ ಹಗಲಿನ ಸಮಯದಲ್ಲಿ ಅಸಹಜವಾಗಿ ಬೆಚ್ಚಗಿನ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಕೊರಿಯಾದ ಟೈಫೂನ್ ರಿಸರ್ಚ್ ಸೆಂಟರ್ ಜೆಜು ನ್ಯಾಷನಲ್ ಯೂನಿವರ್ಸಿಟಿಯ ಸಂಶೋಧಕ ವಿನೀತ್ ಕುಮಾರ್ ಸಿಂಗ್, ಈ ತಿಂಗಳು ಮಳೆಯ ಗಮನಾರ್ಹವಾಗಿ ಮಳೆ ಕೊರತೆ ಇದಕ್ಕೆ ಕಾರಣ. “ವಾಯುವ್ಯ ಭಾರತದಲ್ಲಿ ಈ ತಿಂಗಳು ಶೇಕಡಾ 30 ನಷ್ಟು ಮಳೆ ಕೊರತೆ ಎದುರಿಸುತ್ತಿದೆ, ಆದರೆ ಪೂರ್ವ, ಈಶಾನ್ಯ ಭಾರತದಲ್ಲಿ ಶೇಕಡಾ 44 ರಷ್ಟು ಹೆಚ್ಚು ತೀವ್ರ ಕೊರತೆಯನ್ನು ಎದುರಿಸುತ್ತಿದೆ ಎಂದು ತಿಳಿಸಿದ್ಧಾರೆ.

ಸೆಪ್ಟಂಬರ್ ತಿಂಗಳಲ್ಲಿ ಇದುವರೆಗೆ ಭಾರತದ ಅನೇಕ ಭಾಗಗಳು ಸಾಮಾನ್ಯಕ್ಕಿಂತ ಬೆಚ್ಚಗಿದ್ದರೆ, ಬೆಟ್ಟ ಪ್ರದೇಶಗಳಲ್ಲಿ ತಾಪಮಾನ ವಿಶೇಷವಾಗಿ ಹೆಚ್ಚಾಗಿದೆ. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಋತುಮಾನದ ಸರಾಸರಿಗಿಂತ 2-3 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ತಂಪಾದ ವಾತಾವರಣಕ್ಕೆ ಹೆಸರುವಾಸಿಯಾಗಿರುವ ಶ್ರೀನಗರದಲ್ಲಿ ಬುಧವಾರ 34 ಡಿಗ್ರಿ ಸೆಲ್ಸಿಯಸ್ ಹಗಲಿನ ತಾಪಮಾನ ದಾಖಲಾಗಿದೆ, ಇದು ಸಾಮಾನ್ಯಕ್ಕಿಂತ ಸುಮಾರು ಆರು ಹಂತಗಳು ಹೆಚ್ಚಾಗಿದೆ. ಅಂತೆಯೇ, ಶಿಮ್ಲಾದಲ್ಲಿ 26.4 ಡಿಗ್ರಿ ಸೆಲ್ಸಿಯಸ್ ಸಾಮಾನ್ಯ 4.4 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ತಜ್ಞರು ತಿಳಿಸಿದ್ದಾರೆ.