ಸೆನ್ಸಾರ್ ಅಂಗಳದಲ್ಲಿ 5ಡಿ

ಹಿರಿಯ ನಿರ್ದೇಶಕ ಎಸ್.ನಾರಾಯಣ್  ಮುಂದಿನ ಚಿತ್ರ ‘5ಡಿ’. ಕೆಲವೇ ದಿನಗಳಲ್ಲಿ ಚಿತ್ರ ಸೆನ್ಸಾರ್ ಮುಂದೆ ಹೋಗಲಿದ್ದು, ಅತಿ ಶೀಘ್ರದಲ್ಲಿಯೇ ಪ್ರೇಕ್ಷಕರ ಕುತೂಹಲ ಥಣಿಸಲು ತೆರೆಯ ಮೇಲೆ ಬರಲಿದೆ.

ನಟ ಆದಿತ್ಯ  ಹೊಸಲುಕ್ಕು, ಅದಿತಿಪ್ರಭುದೇವ ಅವರ ಮಾದಕ ಕಿಕ್ಕು ಚಿತ್ರದಲ್ಲಿದೆ. ಕ್ಷಣ ಕ್ಷಣಕ್ಕೂ ರೋಮಾಂಚನ, ಕುತೂಹಲ ನಿರೀಕ್ಷಿಸಲಾರದಷ್ಟು ತಿರುವುಗಳು. ಚಿತ್ರಕತೆ ರಚಿಸುವಾಗಲೇ ಪ್ರತಿ ಹಂತದಲ್ಲಿಯೂ ನೋಡುಗರನ್ನೆ ನಿಬ್ಬೆರಗಾಗಿಸುವ ಸನ್ನಿವೇಶಗಳು. ಇಡೀ ಚಿತ್ರತಂಡ ಸಂತೃಪ್ತಿಯಾಗಿ ಕಾರ್ಯ ನಿರ್ವಹಿಸಿದೆ.

ಸ್ವಾತಿಕುಮಾರ್  ನಿರ್ಮಾಣವಿದೆ.ಕುಮಾರಗೌಡ ಛಾಯಾಗ್ರಹಣ, ಶಿವಪ್ರಸಾದ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ, ಮಾಲೂರು ಶ್ರೀನಿವಾಸ್ ನೃತ್ಯ ಸಂಯೋಜನೆ ಇರಲಿದೆ. ಸೋನುನಿಗಂ ಗಾಯನದ ‘ಪಿಸು ಪಿಸು ಮಾತು’ ಗೀತೆಯು ಕೇಳಿದವರ ಹೃದಯದಲ್ಲಿ ಕಚಗುಳಿಯಿಟ್ಟು ಟ್ರೆಂಡಿಯಾಗಿರುವುದು ವಿಶೇಷ. ಬಿಡುಗಡೆಯಾದ ಒಂದೇ ವಾರದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಕೇಳುಗರ ಮನತಣಿಸಿದೆ.