ಸೆಟ್ಟೇರಿದ `ಸೆಕ್ಟರ್ 7′

ನೈಜಘಟನೆ ಆಧಾರಿತ ” ಸೆಕ್ಟರ್ 7″ ಚಿತ್ರ ಸೆಟ್ಟೇರಿದೆ. ನೈಜಘಟನೆ ಆಧಾರಿತ ಹಾಗೂ ಹಾರಾರ್ ಕಥಾಹಂದರ ಹೊಂದಿರುವ ಚಿತ್ರವನ್ನು ಸಂಜೀವ್ ಗವಂಡಿ ನಿರ್ದೇಶಿಸುತ್ತಿದ್ದಾರೆ. ಮಂಜುಳ ಅರಸ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರದ ಮೊದಲ ಸನ್ನಿವೇಶಕ್ಕೆ ಕೃಷ್ಣರಾಜೇ ಅರಸ್ ಆರಂಭ ಫಲಕ ತೋರಿದರು. ಶ್ರೀಕಾಂತ್ ರಾಜೇ ಅರಸ್ ಕ್ಯಾಮೆರಾ ಚಾಲನೆ ಮಾಡಿದರು. ಬೆಂಗಳೂರು ಹಾಗೂ ಊಟಿಯಲ್ಲಿ ಚಿತ್ರೀಕರಣ ನಡೆಯಲಿದೆ.ಎರಡು ಹಾಡುಗಳಿರುವ  ಚಿತ್ರಕ್ಕೆ ವಿನು ಮನಸ್ಸು ಸಂಗೀತ ವೀರೇಶ್ ಛಾಯಾಗ್ರಹಣವಿದೆ.

ನೂತನ ಪ್ರತಿಭೆ ಸುನೀಲ್ ಕುಮಾರ್ ಚಿತ್ರದ ನಾಯಕ. ಐಶ್ವರ್ಯ ನಾಯಕಿ. ನಿರ್ಮಾಪಕಿ ಮಂಜುಳ ಅರಸ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸ್ನೇಹ, ನಾಗರಾಜು, ಹನುಮಂತೇ ಗೌಡ, ಗಿರೀಶ್ ಜತ್ತಿ, ಹೇಮಾ, ವಿನೋದ್ ಗೊಬ್ಬರಗಾಲ, ಚೇತನ್, ಮೈಕೋ ಶಿವಕುಮಾರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.