ಸೆಟ್ಟೇರಿದ ಸೂರಿ ಲವ್ಸ್ ಸಂಧ್ಯಾ

ಹೊಸಬರ  ಸೂರಿ ಲವ್ಸ್ ಸಂಧ್ಯಾ’ ಚಿತ್ರ ಸೆಟ್ಟೇರಿದೆ. ಈ ಚಿತ್ರದ ಮೂಲಕ ಮತ್ತೊಮ್ಮೆ ಅದೃಷ್ಟ ಕಂಡುಕೊಳ್ಳಲು ಅಭಿಮನ್ಯು ಕಾಶೀನಾಥ್ ಮುಂದಾಗಿದ್ದಾರೆ.

ಮೊದಲ ದೃಶ್ಯಕ್ಕೆ ವಿಕ್ರಂರವಿಚಂದ್ರನ್ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಕೆ.ಟಿ.ಮಂಜುನಾಥ್ ನಿರ್ಮಾಣವಿರುವ ಚಿತ್ರಕ್ಕೆ ಯಾದವ್‌ರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಪ್ರಯಾಣದಲ್ಲಿ ಸಾಗುವ ಕಥೆಯಲ್ಲಿ  ಬಾರ್‌ಸಪ್ಲೈಯರ್ ಆಗಿ ಅಭಿಮನ್ಯು ಕಾಶಿನಾಥ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮಧ್ಯಮ ವರ್ಗದ ಹುಡುಗಿಯಾಗಿ ಅಪೂರ್ವ ನಾಯಕಿ. ಮತ್ತೊಂದು ಮುಖ್ಯ ಪಾತ್ರದಲ್ಲಿ ಪ್ರತಾಪ್‌ ನಾರಾಯಣ್ ಉಳಿದಂತೆ ಪಲ್ಲವಿ, ಶಾರದಮ್ಮ, ಜಯರಾಮಣ್ಣ, ಕೆ.ಎಂ.ರಾಜೇಶ್, ಮೊಟ್ಟೆರಾಜೇಂದ್ರನ್, ನೀನಾಸಂಅಶ್ವಥ್, ಅವೀನ್‌ಸಿಂಗ್, ಪ್ರದೀಪ್‌ಕಬ್ರಾ, ರಾಜೀವ್‌ಪಿಳ್ಳೈ, ಸಿಯಾಜ್‌ಕರೀಂ, ವೆಂಕಟೇಶ್‌ದೀಕ್ಷಿತ್, ಅರಣ್‌ಬಾಬು ಮುಂತಾದವರು ನಟಿಸುತ್ತಿದ್ದಾರೆ.

 ಎಸ್.ಎನ್.ಅರುಣಗಿರಿ ಸಂಗೀತವಿದೆ. ಚಿತ್ರವನ್ನು ಬೆಂಗಳೂರು, ಕೋಲಾರ, ಮಹಾರಾಷ್ಟ್ರ, ಮಧ್ಯಪ್ರದೇಶದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಿಕೊಂಡಿದೆ.