ಸೆಟ್ಟೇರಿದ ಸುವ್ವಾಲಿ

ವಿಭಿನ್ ಕಥೆ ಹೊಂದಿರುವ “ ಸುವ್ವಾಲಿ” ಚಿತ್ರ ಸೆಟ್ಟೇರಿದೆ. ಮೊದಲ ದೃಶ್ಯಕ್ಕೆ ಮಕ್ಕಳು ಕ್ಲಾಪ್ ಮಾಡಿದ್ದು ವಿಶೇಷ. ಬೆಂಗಳೂರಿನ ಎಂ.ಮಹೇಶ್ ನಿರ್ಮಾಣ ಮಾಡುತ್ತಿದ್ದಾರೆ.

ರಚನೆ,ಚಿತ್ರಕಥೆ, ಸಂಭಾಷಣೆ ಬರೆದು ಎಂ.ಮಹೇಶ್‍ಬಾಬು ನಿರ್ದೇಶನ ಮಾಡುತ್ತಿದ್ದಾರೆ. ಬಿಡುಗಡೆಯಾದ ಪೆÇೀಸ್ಟರ್‍ದಲ್ಲಿ ಕಥೆ ಹೇಳುವ ಪ್ರಯತ್ನ ಮಾಡಿದೆ ಚಿತ್ರತಂಡ. ಬೆಂಗಳೂರು ಹಾಗೂ ಮೈಸೂರು ಸುಂದರ ತಾಣಗಳಲ್ಲಿ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ತಂಡ ಯೋಜನೆ ಹಾಕಿಕೊಂಡಿದೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಮಹೇಶ್ ಬಾಬು ಅನಾಥ ಮಕ್ಕಳ ಸುತ್ತ ಸಾಗುತ್ತದೆ. ಇಂತಹ ಮಕ್ಕಳು ಸಮಾಜದಲ್ಲಿ ಏನಾಗುತ್ತಾರೆ. ಅವರ ಭವಿಷ್ಯ ಯಾವ ರೀತಿ ತೆಗೆದುಕೊಂಡು ಹೋಗತ್ತೆ. ಅಪ್ಪ ಅಮ್ಮ ರೂಪಿಸಿದ್ದ ಭವಿಷ್ಯವೇ ಕೆಲವೊಮ್ಮೆ ಸರಿ ದಾರಿಗೆ ಹೋಗುವುದಿಲ್ಲ. ಏನು ಇಲ್ಲದವರ ಪರಿಸ್ಥಿತಿ ಏನಾಗುತ್ತದೆ.  ಇಂತಹ ಮುಗ್ದ ಮಕ್ಕಳಿಗೆ ಹೆಣ್ಣು ಮಗುವೊಂದು ಸಿಗುತ್ತದೆ. ಇದರಿಂದ ಏನೇನು ಕಷ್ಟಗಳನ್ನು ಎದುರಿಸುತ್ತಾರೆ. ಇದರ ಮಧ್ಯೆ ಪ್ರೀತಿಯ ಉಪಕಥೆ ತೆರೆದುಕೊಳ್ಳುತ್ತದೆ ಎನ್ನುವ ಮಾಹಿತಿ ನೀಡಿದ್ದಾರೆ.

ತಾರಾಗಣದಲ್ಲಿ ಅಂಜನ್, ಸಚ್ಚಿನ್‍ಪುರೋಹಿತ್, ಅಂಜನಾ, ಲಯಾಕೋಕಿಲ, ರಘು ಚಿಣ್ಣರುಗಳಾದ ಅಂಕಿತಮೂರ್ತಿ, ಮಾನ್ಯ ಮುಂತಾದವರು ನಟಿಸುತ್ತಿದ್ದಾರೆ. ವಿ.ಮನೋಹರ್ ಸಾಹಿತ್ಯ ಮತ್ತು ಸಂಗೀತ, ಮನುವಿಜಯ್‍ಕುಮಾರ್ ಛಾಯಾಗ್ರಹಣವಿದೆ