ಸೆಟ್ಟೇರಿದ `ಸಿಂಹರೂಪಿಣಿ’  ಆಕ್ಷನ್ ಕಟ್‍ಗೆ ಸಜ್ಜು

ಪ್ರಸಕ್ತ ಭಕ್ತಿ ಪ್ರಧಾನ ಚಿತ್ರಗಳು ಕಡಿಮೆ ಆಗುತ್ತಿರುವ ಸಂದರ್ಭದಲ್ಲಿ, ‘ಸಿಂಹರೂಪಿಣಿ’ ಸಿನಿಮಾ ಸೆಟ್ಟೇರಿದೆ. ಗೀತ ರಚನೆಕಾರ ಕಿನ್ನಾಳ್ ರಾಜ್, ಎರಡನೇ ಭಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು,

ಬೆಂಗಳೂರು, ದೊಡ್ಡಬಳ್ಳಾಪುರ ಹಾಗೂ ಕರ್ನಾಟಕದ ಪುಣ್ಯ ಕ್ಷೇತ್ರಗಳಲ್ಲಿ ಚಿತ್ರೀಕರಣ ನಡೆಯಲಿದೆ. ಅಂದುಕೊಂಡಂತೆ ಆದರೆ ಯುಗಾದಿ ಹಬ್ಬಕ್ಕೆ ಬಿಡುಗಡೆ ಮಾಡ  ತಂಡ ಯೋಜನೆ ಹಾಕಿಕೊಂಡಿದೆ.

ಶೀರ್ಷಿಕೆ ಹೇಳುವಂತೆ ಶ್ರೀ ಮಾರಮ್ಮ ದೇವಿ ಕುರಿತಾಗಿದ್ದು, ಗ್ರಾಫಿಕ್ಸ್ ತಂತ್ರಜ್ಘಾನ ಇರುವುದು ವಿಶೇಷ. ಸಪ್ತ ಮಾತ್ರ್ರಿಕೆಯರ ವಿಷಯಗಳನ್ನು ಹೊಂದಿದ್ದು, ರಾಕ್ಷಸನನ್ನು ಸಂಹಾರ ಮಾಡಲು ಪಾರ್ವತಿದೇವಿ ಏಳು ಅವತಾರಗಳಲ್ಲಿ ಭೂಮಿಗೆ ಬರುತ್ತಾಳೆ. ಅದರಲ್ಲಿ ಕೊನೆಯದು ಶ್ರೀ ಮಾರಮ್ಮ ದೇವಿಯದು ಆಗಿರುತ್ತದೆ. ಹಾಗೂ ತಾಯಿಯ ಪವಾಡಗಳನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ ಎನ್ನುವುದು ನಿರ್ದೇಶಕ ಕಿನ್ನಾಳ್ ರಾಜ್ ವಿವರಣೆ.

ತಾರಾಗಣದಲ್ಲಿ ಹರೀಶ್‍ರಾಯ್, ಯಶ್‍ಶೆಟ್ಟಿ, ದಿನೇಶ್‍ಮಂಗಳೂರು, ಪುನೀತ್ ರುದ್ರನಾಗ್, ನೀನಾಸಂ ಅಶ್ವತ್ಥ್, ಹಿರಿಯ ನಟ ಸುಮನ್, ತಮಿಳಿನ ದಿನಾ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಹೊಸ ಪ್ರತಿಭೆ ಸಾಗರ್, ನಿರೂಪಕಿ ಅಂಕಿತಾಗೌಡ ಈ ಚಿತ್ರದ ಮೂಲಕ ನಾಯಕಿ. ಉಳಿದಂತೆ  ಯಶಸ್ವಿನಿ, ಭಜರಂಗಿ ಪ್ರಸನ್ನ, ಬಲರಾಜವಾಡಿ, ವಿಜಯ್‍ಚೆಂಡೂರು, ಗಣೇಶ್‍ರಾವ್, ಮನಮೋಹನ್‍ರೈ, ಹಿಟ್ಲರ್ ಸಿನಿಮಾದ ನಾಯಕ ಆರವ್‍ಲೋಹಿತ್, ಪೀಳ್ಳಣ್ಣ, ಕೆಂಪೆಗೌಡ,  ರೀಲ್ಸ್ ಹಾಗೂ ಶಾರ್ಟ್ ಫಿಲಂಸ್ ಮೂಲಕ ಮನೆ ಮಾತಾಗಿರುವ ಭೂಮಿಕಮಂಜುನಾಥ್, ಮಧುಶ್ರೀ, ರಾಶೀಕ, ವೇದಾಹಾಸನ್, ಸುನಂದಕಲ್ಬುರ್ಗಿ ಮುಂತಾದವರು ನಟಿಸುತ್ತಿದ್ದಾರೆ. ಆಕಾಶ್‍ಪರ್ವ ಸಂಗೀತ, ನಂದಕುಮಾರ್  ಛಾಯಾಗ್ರಹಣ ನಂದಕುಮಾರ್‍ವಿದೆ.