ಸೆಟ್ಟೇರಿದ ವೈರಲ್ ಗೀತೆ `ಕರಿಮಣಿ ಮಾಲೀಕ ನೀನಲ್ಲ’

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಾಡಿನ ಸಾಲು ಇಟ್ಟುಕೊಂಡು ಚಂದ್ರು ಓಬಯ್ಯ, “”ಕರಿಮಣಿ ಮಾಲಿಕ ನೀನಲ್ಲ” ಕೈಗೆತ್ತಿಕೊಂಡಿದ್ದರೆ

ಈ ವೇಳೆ ಮಾತನಾಡಿದ ಚಂದ್ರು ಓಬಯ್ಯ ‘ ಯುಟರ್ನ್ 2 ಬಳಿಕ ರಾಮು ಅಂಡ್ ರಾಮು ಚಿತ್ರ ಮಾಡಿದ್ದೆ. ಸೆನ್ಸಾರ್ ಹಂತದಲ್ಲಿದೆ.ಪ್ಯಾಟಿ ಹುಡ್ಗಿ ಹಳ್ಳಿ ಲೈಫು ಇನ್ನೂ ಚಿತ್ರೀಕರಣ ಹಂತದಲ್ಲಿದೆ. ಈಗ ಕರಿಮಣಿ ಮಾಲಿಕ ನೀನಲ್ಲ ಸಿನಿಮಾ ಆರಂಭ ಮಾಡಿದ್ದು ಮುಂದಿನ ತಿಂಗಳು ಆರಂಭವಾಗಲಿದೆ’

ಎಳನೀರು ಮಾರೋ ಹುಡುಗ, ಹೂ ಮಾರೋ ಹುಡುಗಿಯ ನಡುವೆ ನಡೆಯೋ ವಿಭಿನ್ನ ಪ್ರೇಮಕಥೆ  ಚಿತ್ರದಲ್ಲಿದೆ. 40  ದಿನಗಳ ಕಾಲ ಬೆಂಗಳೂರು, ಮೈಸೂರು, ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ಮಾಡುವ ಉದ್ದೇಶವಿದೆ.ನಾಯಕಿಯಾಗಿ ರಮಿಕಾ ಸುತಾರ ಅಭಿನಯಿಸುತ್ತಿದ್ದು, ನಾಯಕನ ಪಾತ್ರಕ್ಕೆ ಹುಡುಕಾಟ ನಡೆಸಿದ್ದೇವೆ ಎಂದರು.

ನಾಯಕಿ ರಮಿಕಾ ಸುತಾರ ಮಾತನಾಡಿಮೂಲತ: ಗುಲ್ಬರ್ಗದವಳು. ಸಿನಿಮಾ ಬಗ್ಗೆ ಮೊದಲಿಂದಲೂ ಆಸಕ್ತಿಯಿತ್ತು. ಅವಕಾಶ ಸಿಕ್ಕಿರಲಿಲ್ಲ. ನಟನಾ ತರಬೇತಿಗೆ ಹೋಗಿ ಕಲಿತಿದ್ದೇನೆ. ಚಿತ್ರದಲ್ಲಿ ಹೂ ಮಾರುವ ಹುಡುಗಿಯಾಗಿ ನಟಿಸುತ್ತಿದ್ದೇನೆ ಎಂದು ಹೇಳಿದರು.

ಮತ್ತೊಬ್ಬ ನಟಿ ಮೀನಾ ಕಿರಣ್ ಮಾತನಾಡಿ  ಈಗಾಗಲೇ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಹಿಂದೆ ಚಂದ್ರು ಜೊತೆ ಒಂದು ಚಿತ್ರ ಮಾಡಿದ್ದೆ. ಇದರಲ್ಲಿ ನಾನು ನಾಯಕಿಯ ತಾಯಿ ಪಾತ್ರ ಮಾಡುತ್ತಿದ್ದೇನೆ ಎಂದರು. ವೀನಸ್ ನಾಗರಾಜಮೂರ್ತಿ ಚಿತ್ರದ ಕ್ಯಾಮೆರಾ ಚಿತ್ರಕ್ಕಿದೆ.