ಸೆಟ್ಟೇರಿದ `ರುದ್ರ ಗರುಡ ಪುರಾಣ’

* ಚಿ.ಗೋ ರಮೇಶ್

ವಿಭಿನ್ನ ಕಥಾಹಂದರ ಹೊಂದಿರುವ  “ರುದ್ರ ಗರುಡ ಪುರಾಣ” ಚಿತ್ರ ಸೆಟ್ಟೇರಿದೆ. ಮಹೂರ್ತದ ದಿನದಿಂದಲೇ ಚಿತ್ರೀಕರಣ ಆರಂಭವಾಗಿದೆ. ನಟ ರಿಷಿ ಈ ಚಿತ್ರದಲ್ಲಿ ನಾಯಕನಾಗಿ ಮೋಡಿ ಮಾಡಲು ಮುಂದಾಗಿದ್ದಾರೆ. ಹೊಸ ಪ್ರತಿಭೆ ಪ್ರಿಯಾಂಕ ಕುಮಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ನಟ ನೀನಾಸಂ ಸತೀಶ್ ನಿರ್ದೇಶನ ಚಂಬಲ್ ಮತ್ತು ಡಿಯರ್ ವಿಕ್ರಂ ಚಿತ್ರ ನಿರ್ದೇಶನ ಮಾಡಿದ್ದ ಕೆ.ಎಸ್ ನಂದೀಶ್ “ ರುದ್ರ ಗರುಡ ಪುರಾಣ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೇ ಪ್ರೀತಿ ಅಭಿಮಾನಕ್ಕೆ ನಟ ನೀನಾಸಂ ಸತೀಶ್ ಮಹೂರ್ತ ಸಮಾರಂಭಕ್ಕೆ ಆಗಮಿಸಿ ತಂಡಕ್ಕೆ ಶುಭಹಾರೈಸಿದರು.

ಮುಹೂರ್ತದ ಬಳಿಕ ಮಾತಿಗಿಳಿದ  ನಾಯಕ ರಿಷಿ, ಚಿತ್ರದಲ್ಲಿ ಪೆÇಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. “ಕವಲುದಾರಿ”ಯಲ್ಲಿಯೂ ಪೆÇಲೀಸ್ ಅಧಿಕಾರಿಯ ಪಾತ್ರ ಮಾಡಿದ್ದೆ.ಅದೇ ಜಾನರ್  ಇನ್ನೊಂದು ಚಿತ್ರ ಮಾಡುವುದಕ್ಕೆ ಇಷ್ಟವಿರಲಿಲ್ಲ. ಆದರೆ ನಿರ್ದೇಶಕ ನಂದೀಶ್ ಹೇಳಿದ ಕಥೆ ಇಷ್ಟವಾಯಿತು.ಎರಡೂ ಚಿತ್ರಗಳ ನಡುವೆ ಹೋಲಿಕೆ ಇಲ್ಲ ಎನ್ನುವ ಸ್ಪಷ್ಟನೆ ನೀಡಿದರು.

ಜೊತೆಗೆ ಕರ್ಮ, ಪಾಪ, ಪುಣ್ಯಕ್ಕೆ ಸಂಬಂಧಿಸಿದ ಗರುಡ ಪುರಾಣದ ಸಾಕಷ್ಟು ಅಂಶಗಳು ಈ ಚಿತ್ರದಲ್ಲಿದೆ ಚಿತ್ರಕ್ಕೆ “ಗರುಡ ಪುರಾಣ” ಎಂದು ಹೆಸರಿಡಲು ನಿರ್ಧರಿಸಿದ್ದೆವು. ಚಿತ್ರದಲ್ಲಿ ಪಾತ್ರದ ಹೆಸರು ರುದ್ರ. ಹಾಗಾಗಿ “ರುದ್ರ ಗರುಡ ಪುರಾಣ” ಅಂತ ಶೀರ್ಷಿಕೆ ಇಡಲಾಗಿದೆ ಎಂದು ಮಾಹಿತಿಹಂಚಿಕೊಂಡರು.

ನಿರ್ದೇಶಕ ಕೆ.ಎಸ್ ನಂದೀಶ್, ಕೆಲಸ ಮಾಡುವ ಚಿತ್ರ, ಜನರಿಗೆ ತಲುಪಿದಾಗ ಮುಂದೆ ಇಂತಹ ಹೆಚ್ಚುಹೆಚ್ಚು ಚಿತ್ರಗಳನ್ನು ಮಾಡಲು ಪ್ರೋತ್ಸಾಹ ಮತ್ತು ಹುಮ್ಮಸ್ಸು ಬರುತ್ತದೆ ಎಂದರು.

ನಾಯಕಿ ಪ್ರಿಯಾಂಕ ಕುಮಾರ್, ನಟರಾದ ಶಿವರಾಜ್ ಕೆ ಆರ್ ಪೇಟೆ, ಪವನ್  ತಮ್ಮ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.ಉದ್ಯಮಿ ಲೋಹಿತ್ ನಿರ್ಮಾಣ ಮಾಡುತ್ತಿದ್ದು ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ.

ರಿಷಿ ಮತ್ತೊಮ್ಮೆ ಪೊಲೀಸ್

ಕವಲುದಾರಿ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದ ನಟ ರಿಷಿ, ಇದೀಗ ರುದ್ರ ಗರುಡ ಪುರಾಣ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆಯಲು ಮುಂದಾಗಿದ್ದಾರೆ. ನಟ ನೀನಾಸಂ ಸತೀಶ್ ಅವರ ಎರಡು ಚಿತ್ರಗಳಿಗೆ ನಿರ್ದೇಶನ ಮಾಡಿದ್ದ ನಂದೀಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.