ಸೆಟ್ಟೇರಿದ `ರೀತು’

ಕನ್ನಡಕ್ಕೆ ಮತ್ತೊಬ್ಬ ಮಹಿಳಾ ನಿರ್ದೇಶಕಿ ಸೇರ್ಪಡೆಯಾಗಿದೆ.ಅದುವೇ “ರೀತು” ಚಿತ್ರದ ಮೂಲಕ.  ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಕಲಾವಿದೆಯಾಗಿ ಗಮನ ಸೆಳೆದಿರುವ ಗೌರಿಶ್ರೀ “ ರೀತು” ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಅಂದಹಾಗೆ ಗೌರಿಶ್ರೀ ಈಗಾಗಲೇ 2 ಚಿತ್ರ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ ಸಹ ಕಲಾವಿದೆಯಾಗಿ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಇದೀಗ ರೀತು ಚಿತ್ರದ ಮೂಲಕ ಮಹಿಳಾಪ್ರದಾನ ಕಥೆಯನ್ನು ತೆರೆಯ ಮೇಲೆ ತರಲು ಮುಂದಾಗಿದ್ಧಾರೆ. ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು.

ಚಿತ್ರದಲ್ಲಿ ಬೃಂದಾ ಆಚಾರ್ಯ ಚಿತ್ರದ ನಾಯಕಿಯಾಗಿದ್ದು, ಮಡೇನೂರು ಮನು, ಪ್ರಫುಲ್ ಸುರೇಂದ್ರ ಹಾಗೂ ಆರ್ಯನ್ ಮೂವರು ನಾಯಕಿಯರಾಗಿ ನಟಿಸುತ್ತಿದ್ದಾರೆ. ವಿ2 ಪ್ರೊಡಕ್ಷನ್ಸ್ ಮೂಲಕ ಆನಂದ್ ಹಲಗಪ್ಪ ಹಾಗೂ ಹೇಮಂತ್ ಹೆಚ್.ಕೆ. ಚಿತ್ರವನ್ನು ನಿರ್ಮಿಸುತ್ತಿದ್ದಾರೆ,

ಮಹೂರ್ತದ ಬಳಿಕ ಮಾತಿಗಿಳಿದ ನಿರ್ದೇಶಕಿ ಗೌರಿಶ್ರೀ, ಜನರಕ್ಷಕ ಹಾಗೂ ಅಮೂಲ್ಯ ನಂತರ ಮೂರನೇ ಚಿತ್ರ. ಮಂಡ್ಯಗೆ ಹೋದಾಗ ಈ ಘಟನೆಯ ಬಗ್ಗೆ  ತಿಳಿದುಕೊಂಡಿದ್ದೆ, ಹುಡುಗಿಯ ಜೀವನದಲ್ಲಿ ನಡೆಯುವ ಕಥೆ. ಆಕೆಯ ಹಣೆಬರಹ ಸರಿ ಇಲ್ಲದಿದ್ರೆ ಜನ ಆಕೆಯನ್ನು ಹೇಗೆಲ್ಲ ನೋಡ್ತಾರೆ, ಅಲ್ಲದೆ ತುಂಬಿದ ಫ್ಯಾಮಿಲಿಯಲ್ಲಿ ಒಬ್ಬ ಹುಡುಗಿ ಹೇಗೆ ತುಂಬಾ ಇಂಪಾರ್ಟೆಂಟ್ ಆಗಿರ್ತಾಳೆ ಎನ್ನುವುದನ್ನು ತೆರೆಯ ಮೇಲೆ ತೋರುಸಿವ ಪ್ರಯತ್ನ ಮಾಡಲಾಗುತ್ತಿದೆ ಮದುವೆಯಾದ ನಂತರ ಆಕೆಯ ಜೀವನ ಹೇಗೆ ಬದಲಾಗುತ್ತೆ ಎಂಬುದನ್ನು ರೀತು ಚಿತ್ರದ ಮೂಲಕ ಹೇಳಹೊರಟಿದ್ದೇನೆ ಎನ್ನುವ ಮಾಹಿತಿ ನೀಡಿದರು.

ಚಿತ್ರವನ್ನು ಬೆಂಗಳೂರು, ಮೈಸೂರು, ಮಂಡ್ಯ, ಊಟಿ, ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆಸುವ ಯೋಜನೆಯಿದೆ ಎಂದು ಹೇಳಿದರು.,

ನಾಯಕಿ ಬೃಂದಾ ಆಚಾರ್ಯ ಮಾತನಾಡಿ ಮಹಿಳಾ ಪ್ರಧಾನ ಚಿತ್ರ. ಹೆಣ್ಣಿನ ಹೋರಾಟದ ಕಥನ ಇದೆ. ಮಹಿಳಾ ನಿರ್ದೇಶಕಿಯ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗಿದೆ ಎಂದರೆ ನಾಯಕರಾದ ಪ್ರಫುಲ್, ಆರ್ಯನ್ ಮಾಹಿತಿ ಹಂಚಿಕೊಂಡರು.

ನಟ ಲಯೇಂದ್ರ ಮಾತನಾಡಿ  ಹೋರಾಟ, ಟ್ರಾಜಿಡಿ ಕಥೆ ಜನರಿಗೆ ಇಂಪ್ಯಾಕ್ಟ್ ಆಗುತ್ತೆ, ಕಥೆ ತುಂಬಾ ಚೆನ್ನಾಗಿದ್ದು, ಅದನ್ನು ಹೇಗೆ ಪ್ರೆಸೆಂಟ್ ಮಾಡುತ್ತಾರೆ ಎನ್ನುವುದರ ಮೇಲೆ ಸಿನಿಮಾ ನಿಂತಿದೆ ಎಂದರು.

ಕಲಾವಿದರಾದ ಆಡುಗೋಡಿ ಶ್ರೀನಿವಾಸ್, ಶಿವಕುಮಾರ್ ಆರಾಧ್ಯ, ನಟಿಯರಾದ ಜಾಹ್ನವಿ, ತೇಜಸ್ವಿನಿ ತಂತಮ್ಮ ಪಾತ್ರಗಳನ್ನು  ವಿವರಿಸಿದರು. ನಿರ್ದೇಶಕ ನಾಗೇಂದ್ರ ಅರಸ್ ಹಿರಿಯನಟ ಶೋಭರಾಜ್ ಭಾವನಾಗಿ ನಟಿಸುತ್ತಿದ್ದಾರೆ.  ಸಂಗೀತ ಹೇಮಂತ್‍ಕುಮಾರ್ ,. ಛಾಯಾಗ್ರಾಹಕ ಸಂದೀಪ್ ಹೊನ್ನಳ್ಳಿ ಮಾಹಿತಿ ಹಂಚಿಕೊಂಡರು.