
ಚಿತ್ರಬ್ರಹ್ಮ ಪುಟ್ಟಣ ಕಣಗಾಲ್ ಅವರ ನಾಗರಹಾವು ಚಿತ್ರ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿದೆ. ಆ ಚಿತ್ರದ ರಾಮಾಚಾರಿ ಹಾಗೂ ಮಾರ್ಗರೇಟ್ ಪಾತ್ರಗಳು ಇಂದಿಗೂ ಪ್ರೇಕ್ಷಕರ ಜನ ಮಾನನದಲ್ಲಿ ಅಚ್ಚಳಿಯದೇ ಉಳಿದಿವೆ.
ಇದೇ ಪಾತ್ರಗಳನ್ನು ಇಟ್ಕೊಂಡು ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಯಶಸ್ಸು ಕಂಡಿತ್ತು. ಇದೀಗ ಅದೇ ಪಾತ್ರಗಳ ಸ್ಫೂರ್ತಿ ಪಡೆದು ಹೊಸ ಸೆಟ್ಟೇರಿದೆ. ಚಿತ್ರಕ್ಕೆ “ಮಾರ್ಗರೇಟ್ ಲವರ್ ಆಫ್ ರಾಮಾಚಾರಿ” ಎಂದು ಹಸರಿಡಲಾಗಿದೆ.
ಅಭಿಲಾಶ್ ಹಾಗು ಸೋನಲ್ ಮೊಂಥೆರೋ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಚಿತ್ರದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ ಡಾಲಿ ಧನಂಜಯ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಈ ವೇಳೆ ಮಾತಿಗಿಳಿದ ನಿರ್ದೇಶಕ ಗಿರಿಧರ್ ಕುಂಬಾರ್ ಚಿತ್ರದ ಮೂಲಕ ಸಮಾಜಕ್ಕೆ ಬೇಕಿರುವ ಸಂದೇಶ ನೀಡಲು ಮುಂದಾದೆವು. ಸಾಮಾನ್ಯ ಹುಡುಗನಿಗೆ ಶ್ರೀಮಂತ ಹುಡುಗಿ ಸಿಕ್ಕಾಗ ಏನಾಗುತ್ತದೆ ಅನ್ನೋದೆ ಕಥೆ. ಮೇ 15ರಂದು ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಿದರು.
ನಟ ಅಭಿಲಾಷ್, ಹಲವು ಚಿತ್ರಗಳಲ್ಲಿ ನಟಿಸಿದ ಬಳಿಕ ನಾಯಕನಾಗುವ ಅವಕಾಶ ಸಿಕ್ಕಿದೆ. ಇದು ತುಂಬಾ ಎಮೋಷನಲ್ ಸನ್ನಿವೇಶ. ಇವತ್ತು ಕಷ್ಟಪಟ್ಟು ಈವರೆಗೆ ಬಂದಿದ್ದೇನೆ. ಡಾಲಿ ಧನಂಜಯ ಅವರು ಹಾರೈಸಿರುವುದು ಖುಷಿಕೊಟ್ಟಿದೆ ಎಂದರು. ಸೋನಲ್ ಮೊಂಥೆರೋ ಹಾಗು ನಿರ್ಮಾಪಕ ಹರೀಶ್ ಮಾತಾನಾಡಿ ತಂಡಕ್ಕೆ ಎಲ್ಲರ ಸಹಕಾರವಿರಲಿ ಎಂದು ಕೇಳಿಕೊಂಡರು. ವಾಸುಕಿ ವೈಭವ್ ಸಂಗೀತವಿದೆ.