ಸೆಟ್ಟೇರಿದ  ಭೈರತಿ ರಣಗಲ್

“ಮಫ್ತಿ” ಚಿತ್ರದ ನಂತರ ನಟ ಶಿವರಾಜ್ ಕುಮಾರ್ ಮತ್ತು‌ ನಿರ್ದೇಶಕ ನರ್ತನ್ ಮತ್ತೆ ಜೊತೆಯಾಗಿದ್ದಾರೆ. ಅದುವೇ ಮಫ್ತಿಯ ಮುಂದುವರಿದ ಭಾಗ ” ಬೈರತಿ ರಣಗಲ್” ಚಿತ್ರದ ಮೂಲಕ. “ವೇದ” ಚಿತ್ರದ ನಂತರ ಗೀತಾ ಶಿವರಾಜ್ ಕುಮಾರ್ ನಿರ್ಮಾಣದ  ಎರಡನೇ ಚಿತ್ರ ಇದು.

ಮುಹೂರ್ತದ ಬಳಿಕ ಮಾತಿಗಿಳಿದ ಶಿವರಾಜ್ ಕುಮಾರ್ , ಮಫ್ತಿ” ಚಿತ್ರದ ಭೈರತಿ ರಣಗಲ್  ಇಷ್ಟವಾದ ಪಾತ್ರ. ಸಂಸ್ಥೆಯಿಂದ ನಿರ್ಮಾಣ ಮಾಡುತ್ತಿದ್ದೇವೆ.  “ಮಫ್ತಿ” ಬಂದು ಆರು ವರ್ಷಗಳಾಗಿದೆ. ಈಗಲೂ ನಾನು ಹಾಗೆ ಇದ್ದೀನಿ. ಹಾಗಾಗಿ  ಪಾತ್ರ ಮಾಡಲು ಅನುಕೂಲವಾಗಿದೆ  ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದರು .

ನಿರ್ದೇಶಕ ನರ್ತನ್,  ಶಿವರಾಜಕುಮಾರ್ ಚಿತ್ರದ ನಾಯಕ   ಹಾಗೂ ಗೀತಾ ಶಿವರಾಜಕುಮಾರ್ ನಿರ್ಮಾಣ ಮಾಡುತ್ತಿರುವುದು  ಸಂತೋಷವಾಗಿದೆ. ರವಿ‌ ಬಸ್ರೂರ್ ಸಂಗೀತ ನಿರ್ದೇಶನ, ನವೀನ್ ಕುಮಾರ್  ಛಾಯಾಗ್ರಹಣ, ಶಿವಕುಮಾರ್  ಕಲಾ ನಿರ್ದೇಶನವಿದೆ ಎನ್ನುವ ಮಾಹಿತಿ ನೀಡಿದರು.

ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್, “ಭೈರತಿ ರಣಗಲ್” ಆರಂಭವಾಗಿದ್ದು ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.ನಿರ್ಮಾಪಕಿ ನಿವೇದಿತಾ ಶಿವರಾಜ್ ಕುಮಾರ್, ನಿರ್ಮಾಪಕ ಕೆಪಿ ಶ್ರೀಕಾಂತ್ ಸೇರಿದಂತೆ ಮತ್ತಿತರಿದ್ದರು.