ಸೆಟ್ಟೇರಿದ ದೇಸಾಯಿ

“ಲವ್ 360″ ಚಿತ್ರದ ಮೂಲಕ ಗಮನ ಸೆಳೆದಿದ್ದ ನಾಯಕ ಪ್ರವೀಣ್ ಕುಮಾರ್ ಕುಮಾರ್ ಇದೀಗ ” ದೇಸಾಯಿ ” ಚಿತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ಮುಂದಾಗಿದ್ದಾರೆ.

ಮಹಾಂತೇಶ್ ವಿ ಚೊಳಚ್ಚಗುಡ್ಡ ನಿರ್ಮಾಣದ  ಚಿತ್ರಕ್ಕೆ ಬಾಗಲಕೋಟೆಯ ಮುಚಖಂಡಿಯ ಶ್ರೀವೀರಭದ್ರೇಶ್ವರಸ್ವಾಮಿ ದೇವಸ್ಥಾನದಲ್ಲಿ ಸೆಟ್ಟೇರಿದೆ.

ಮೊದಲ ಸನ್ನಿವೇಶಕ್ಕೆ  ಶಾಸಕ ವೀರಣ್ಣ ಚರಂತಿಮಠ ಆರಂಭಫಲಕ ತೋರಿದರೆ ವನಶ್ರೀಮಠ ವಿಜಯಪುರದ ಡಾ.ಜಯಬಸವಕುಮಾರ ಮಹಾಸ್ವಾಮಿಗಳು ಕ್ಯಾಮೆರಾ ಚಾಲನೆ ಮಾಡಿದರು. ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದಂದು ಅರಂಭವಾದ ಹಿನ್ನೆಲೆಯಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ಚಿತ್ರಕ್ಕೆ  ನಾಗಿರೆಡ್ಡಿ  ಚಿತ್ರಕ್ಕೆ  ಆಕ್ಷನ್ ಕಟ್ ಹೇಳಿದ್ದಾರೆ.

ನಾಯಕ  ಪ್ರವೀಣ್ ಕುಮಾರ್ ಮಾತನಾಡಿ, ಹೊಸ ಅಧ್ಯಾಯ ಆಗಲಿದೆ ಅಂತಹ ಚಾಲೆಂಜಿಂಗ್ ಪಾತ್ರ ಇದಾಗಿದೆ. ಚಿತ್ರದ ಕಥೆ ತುಂಬಾ ಇಷ್ಟವಾಯಿತು‌‌ ಎಂದರು

ಚಿತ್ರದ ನಿರ್ಮಾಪಕ ಮಹಾಂತೇಶ ವಿ ಚೊಳಚಗುಡ್ಡ ಮಾತನಾಡಿ, ವಿಶಿಷ್ಟ ಕಥಾಹಂದರ ಹೊಂದಿರುವ ಕಥೆ ನ ಹುಡುಕುತ್ತಿದ್ದಾಗ  ಯೋಚನೆಗೆ ಬಂದದ್ದು ಈ ಗತಕಾಲದ, ತನ್ನದೇ ಆದ ವೈಶಿಷ್ಟ್ಯ ಪರಂಪರೆ. ಹೊಂದಿರುವ “ದೇಸಾಯಿ” ಮನೆತನದ ಕುರಿತು ಮಾಹಿತಿ ಹಂಚಿಕೊಂಡರು

ಮೈಸೂರು ಮೂಲದ ರಾದ್ಯಾ “ದೇಸಾಯಿ” ಚಿತ್ರದ ನಾಯಕಿ‌.ಚಿತ್ಕಲಾ ಬಿರಾದಾರ್, ಮಧುಸೂದನ್ ರಾವ್,  ನಟನ  ಪ್ರಶಾಂತ್, ವೀರೇಂದ್ರ, ಹರಿಣಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಜೈ ಆನಂದ್ ಛಾಯಾಗ್ರಹಣ, ಸಾಯಿಕಾರ್ತಿಕ್ ಸಂಗೀತ ನಿರ್ದೇಶನವಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರೀಕರಣ ನಡೆಸುವ ಉದ್ದೇಶ ನಿರ್ಮಾಪಕರಿಗಿದೆ.