ಸೆಟ್ಟೇರಿದ ಖಲ್ಲಾಸ್ ಮತ್ತೆ ಬಂದ ಆಯೇಷಾ

ರಾಜಕಾರಣಿ ಹಾಗೂ ಪೋಲೀಸ್ ಅಧಿಕಾರಿ ನಡುವೆ ನಡೆಯುವ ಕಥಾಹಂದರವಿರುವ “ಖಲ್ಲಾಸ್” ಚಿತ್ರ ಸೆಟ್ಟೇರಿದೆ. ಶಶಿಕಾಂತ್ ಆನೇಕಲ್ ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲಿ ನಟಿ ಆಯೇಷಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಮತ್ತೊಮ್ಮೆ ಖಡಕ್ ಪೋಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಳೆದವಾರ ಚಿತ್ರದ ಮುಹೂರ್ತವಿತ್ತು. ಮಹೂರ್ತದ ಬಳಿಕ ಚಿತ್ರ ತಂಡ ಮಾಹಿತಿ ಹಂಚಿಕೊಂಡಿತು.ಈ ವೇಳೆ ನಿರ್ದೇಶಕ ಶಶಿಕಾಂತ್, ರೌಡಿಗಳನ್ನು ಬೆಳೆಸುವುದು ಜೀವನ ಎಂದು ರಾಜಕಾರಣಿ ಹೇಳಿದರೆ ಅಂತಹ ರೌಡಿಗಳನ್ನು ಮಟ್ಟ ಹಾಕುವುದೇ ಜೀವನ ಎಂದು ಪೋಲೀಸ್ ಅಧಿಕಾರಿ ಹೇಳುತ್ತಾರೆ. ಇದೇ ಚಿತ್ರದ ಕಥಾವಸ್ತು ಹೊಂದಿದೆ ಎಂದರು.

ಪೆÇಲೀಸ್ ಅಧಿಕಾರಿಯಾಗಿ ಆಯೇಷಾ ಅಭಿನಯಿಸುತ್ತಿದ್ದಾರೆ. “ಜನಗಣಮನ” ಚಿತ್ರದಲ್ಲೂ ಅಭಿನಯಿಸಿದ್ದರು. ತೆಲುಗಿನ ಖ್ಯಾತ ನಟ ಸುಮನ್, ಉಮೇಶ್ ಬಣಕಾರ್, ಕುರಿ ರಂಗ ಹಾಗೂ ಅತಿಥಿ ಪಾತ್ರದಲ್ಲಿ ರವಿಕಾಳೆ ಅಭಿನಯಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ನಲವತ್ತು ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ ಎಂದರು. ನಟಿ ಆಯೇಷಾ, ಪೋಲೀಸ್ ಅಧಿಕಾರಿ ಪಾತ್ರ. ದುಷ್ಟ ರಾಜಕಾರಣಿಗಳನ್ನು ಸರಿದಾರಿಗೆ ತಂದು ಸಮಾಜಕ್ಕೆ ಒಳಿತು ಮಾಡುವ ದಿಟ್ಟ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದೇನೆ ಎನ್ನುವ ವಿವರ ನೀಡಿದರು.

ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಉಮೇಶ್ ಬಣಕಾರ್, ನಿರ್ದೇಶಕ ಶಶಿಕಾಂತ್ ಅವರು ಬಹಳ ದಿನಗಳ ಪರಿಚಯ. ಅವರು ಹೇಳಿದ ಕಥೆ ನನಗೆ ಇಷ್ಟವಾಯಿತು. “ಖಲಾಸ್” ನನ್ನದು ಕಾರ್ಪರೇಟರ್ ಪಾತ್ರ ಎಂದರು.

ಕುರಿ ರಂಗ. ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಕ್ಲಾರೆನ್ಸ್ ಅಲೇನ್ ಕ್ರಿಸ್ಟ ಸಂಗೀತದ ಬಗ್ಗೆ ಹಾಗೂ ಸಿದ್ದಾರ್ಥ್ ರಾಜ್ ಅವರು ಛಾಯಾಗ್ರಹಣದ ಬಗ್ಗೆ ಮಾಹಿತಿ ನೀಡಿದರು. ಈ ಚಿತ್ರಕ್ಕೆ ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮಾಡಲಿದ್ದಾರೆ.

ಸಮಾಜಕ್ಕೆ ಉತ್ತಮ ಸಂದೇಶ ನೀಡಲಿರುವ “ಖಲಾಸ್” ಚಿತ್ರಕ್ಕೆ ದುನಿಯಾ ಬದಲಾದರೂ ಮಗ್ಗಿ ಬದಲಾಗಲ್ಲ ಎಂಬ ಅಡಿಬರಹವಿದೆ. ಚಿತ್ರಕ್ಕೆ ತೆಲುಗಿನ ಬೋಯಪತಿ ಸುಬ್ಬರಾವ್ ಬಂಡವಾಳ ಹಾಕುತ್ತಿದ್ದಾರೆ.