ಸೆಟ್ಟೇರಿದ “ಕೊಳಗ” ರೈತ ಹೋರಾಟದ ಕಿಚ್ಚು

ದೇಶದ್ಯಾಂತ ರೈತ ಹೊರಾಟದ ಕೂಗು ಕೇಳಿಬರುತ್ತಿದೆ. ರಾಜ್ಯದಲ್ಲಿ ಆರಂಭವಾದ ರೈತ ಚಳುವಳಿಯ ಕುರಿತು “ಕೊಳಗ” ಹೆಸರಲ್ಲಿ ಚಿತ್ರ ಸೆಟ್ಟೇರಿದೆ.

ಮುಹೂರ್ತ ಕ್ಕೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಂಡಕ್ಕೆ ಶುಭ ಹಾರೈಸಿದರು.

ನಾ. ಡಿಸೋಜಾ ಬರೆದಿರುವ ’ಕೊಳಗ’ ಕಾದಂಬರಿ ಆಧರಿಸಿರುವ ಚಿತ್ರ ೫೦ರ ದಶಕದಲ್ಲಿ ಶಿವಮೊಗ್ಗ ಭಾಗದಲ್ಲಿ ನಡೆದ ಭೂ ಮಾಲೀಕರು ಮತ್ತು ಗೇಣಿದಾರರ ನಡುವಿನ ಸಂಘರ್ಷ ತೆರೆಯ ಮೇಲೆ ಅನಾವರಣಗೊಳಿಸಲಿದೆ.

ಚಿತ್ರದಲ್ಲಿ ಆದಿ ಲೋಕೇಶ್, ನಿಶಿತಾ ಗೌಡ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇವರೊಂದಿಗೆ ರಂಗಭೂಮಿ ಮತ್ತು ಸ್ಥಳೀಯ ಕಲಾವಿದರು ವಿವಿಧ ಪಾತ್ರಗಳನ್ನು ಮಾಡಲಿದ್ದಾರೆ.

೧೯೭೪ರಲ್ಲಿ ಜಾರಿಯಾದ ಉಳುವವನೇ ಹೊಲದೊಡೆಯ ಐತಿಹಾಸಿಕ ಕಾನೂನಿಗೆ ಮೂಲ ಪ್ರೇರಣೆಯಾಗಿದ್ದ ಚಳುವಳಿಗೆ ಸಿನಿಮಾ ರೂಪ ನೀಡಲು ಮುಂದಾಗಿರುವ ಪ್ರಸನ್ನ ಗೊರಲಕೆರೆ ನಿರ್ದೇಶನ ‌ಜೊತೆಗೆ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ .

ಈ ಕುರಿತು ಮಾಹಿತಿ ಹಂಚಿಕೊಂಡ ನಿ್ದೆರ್ದೇಶಕ ಪ್ರಸನ್ನ, ಕೊಳಗ’ ಭತ್ತದ ಅಳತೆಯ ಮಾಪನದಲ್ಲಿ ಆಗುತ್ತಿದ್ದ ವ್ಯತ್ಯಾಸ, ಅದರಿಂದ ರೈತರಿಗೆ ಆಗುತ್ತಿದ್ದ ಅನ್ಯಾಯ, ಭೂ ಮಾಲೀಕರ ಶೋಷಣೆಗಳು ಚಿತ್ರದಲ್ಲಿ ಪ್ರಾಧಾನವಾಗಿ ಕಾಣಿಸಿಕೊಳ್ಳಲಿವೆ ಎಂದರು.

ಮೊದಲ‌ ಭಾಗದಲ್ಲಿ ಕಾಗೋಡು ಚಳುವಳಿ ಪ್ರಾರಂಭವಾಗಲು ಕಾರಣ ಹೇಳಿದರೆ, ಎರಡನೇ ಭಾಗದಲ್ಲಿ ಚಳುವಳಿಯ ನಂತರ ಏನಾಯಿತು ಎನ್ನುವ ಕತೆ ಇರಲಿದೆ

‘ಸಾಮಾನ್ಯವಾಗಿ ನಮ್ಮ ಇತಿಹಾಸವೇ ನಮಗೆ ಗೊತ್ತಿರುವುದಿಲ್ಲ ಬೇರೆಯವರ ಇತಿಹಾಸವನ್ನು ತಿಳಿಯಲು ಆಸಕ್ತಿ ತೋರುತ್ತಿರುತ್ತೇವೆ. ಇದರ ಜೊತೆಗೆ ನಮ್ಮ, ನಮ್ಮವರ ಹಿನ್ನೆಲೆಯನ್ನು ತಿಳಿಯಬೇಕು. ನಮ್ಮ ಸುತ್ತಮುತ್ತಲೂ ನಡೆದ ಘಟನೆಗಳು, ಅವು ಸೃಷ್ಟಿ ಮಾಡಿದ ಬದಲಾವಣೆಗಳನ್ನು ತಿಳಿದುಕೊಳ್ಳಬೇಕು. ಅವೆಲ್ಲವೂ ದಾಖಲಾಗಿ ಉಳಿಯಬೇಕು ಎನ್ನುವ ವಿವರಣೆ ಅವರದು

ಜ. ೨೨ರಿಂದ ಸಾಗರ ಸುತ್ತಮುತ್ತಲೂ ಚಿತ್ರೀಕರಣ ಆರಂಭವಾಗಲಿರುವ ‘ಕೊಳಗ’ ಚಿತ್ರಕ್ಕೆ ರಾಜ್‌ಗುರು ಸಂಗೀತ ಇರಲಿದೆ